25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೊಸಂಗಡಿ ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

ಹೊಸಂಗಡಿ:ಹೊಸಂಗಡಿ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜು.22 ರಂದು ನಡೆಯಿತು.

ಮಾರ್ಗದರ್ಶಿ ಅಧಿಕಾರಿ ಬೆಳ್ತಂಗಡಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ ಅವರು ಸಭೆಯನ್ನು ಮುನ್ನಡೆಸಿದರು.

ಗ್ರಾಮಸಭೆಯಲ್ಲಿ ಚರಂಡಿ ದುರಸ್ತಿಯಾಗದೆ ರಸ್ತೆಯಲ್ಲಿ ಮಳೆನೀರು ಹರಿಯುವುದರಿಂದ ವಿದ್ಯಾರ್ಥಿಗಳಿಗೆ,ಸಾರ್ವಜನಿಕರು ತೊಂದರೆಗಳನ್ನು ಅನುಭವಿಸಬೇಕಾಗಿದೆ.ತುರ್ತಾಗಿ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಒತ್ತಾಯಿಸಿದರು. ‌ಬೀದಿ ದೀಪ ಸರಿಯಾಗಿ ನಿರ್ವಹಣೆಯಿಲ್ಲದೆ ಕತ್ತಲೆಯಲ್ಲಿ ಓಡಾಟ ಮಾಡುವಂತಾಗಿದೆ.ಕೆಲವು ರಸ್ತೆಗಳನ್ನು ತೋಟದ ಬಳ್ಳಿಗಳು ನುಂಗುತ್ತಿದೆ. ರಸ್ತೆ ದುರಸ್ತಿ, ಬೀದಿ ದೀಪ ವಿಸ್ತರಣೆ ಹಾಗೂ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಸ್ಥರು ಚರ್ಚಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ,ಉಪಾಧ್ಯಕ್ಷೆ ಶಾಂತ,ಕಾರ್ಯದರ್ಶಿ ಕಾಂತಪ್ಪ, ಪಂಚಾಯತ್ ಸದಸ್ಯರಾದ ಶಾಂತಾ, ವಿಶಾಲಾಕ್ಷಿ , ಪ್ರಮೀಳಾ, ನಾಗರತ್ನ,ಲೋಕೇಶ್, ಅಬ್ದುಲ್ ರಹಿಮಾನ್, ಆನಂದ ಕೊಡಿಂಗೇರಿ, ಕರುಣಾಕರ ಪೂಜಾರಿ, ಕಮಲ ಹಾಗೂ ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮಸ್ಥರು ಭಾಗವಹಿಸಿದ್ದರು

Related posts

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ದ್ವಿತೀಯ ಪಿಯು ಫಲಿತಾಂಶ: ಮುಂಡಾಜೆ ಪದವಿ ಪೂರ್ವ ಕಾಲೇಜಿಗೆ ಶೇ.94.28 ಫಲಿತಾಂಶ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ

Suddi Udaya

ಅವಕಾಶಗಳ ಆಗರ, ಸಾಧನೆಗಳ ಸಾಗರ, ಕರಾವಳಿ ಪ್ರವಾಸೋದ್ಯಮ: ಸಂಪತ್ ಬಿ. ಸುವರ್ಣ

Suddi Udaya

ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ವಿ.ಹಿಂ.ಪ ಹಾಗೂ ಭಜರಂಗದಳ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ

Suddi Udaya

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

Suddi Udaya
error: Content is protected !!