ಮಡಂತ್ಯಾರು: ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ”PadDRIVE” ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಈ ವೇಳೆ ಮಡಂತ್ಯಾರಿನ ಸುತ್ತಮುತ್ತಲಿನ ಪ್ರದೇಶಗಳ 7 ಸರಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ.10000 ಮೌಲ್ಯದ ಸ್ಯಾನಿಟರಿ ಪ್ಯಾಡ್ಸ್ ಗಳನ್ನು,ಸುಮಾರು 750 ವಿದ್ಯಾರ್ಥಿನಿಯರಿಗೆ ಈ ಕೆಳಗಿನ ಶಾಲೆಗಳಿಗೆ ವಿತರಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪುಂಜಾಲಕಟ್ಟೆ , ಸರಕಾರಿ ಪ್ರಾಥಮಿಕ ಶಾಲೆ ಮಚ್ಚಿನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಿನ , ಸರಕಾರಿ ಪ್ರಾಥಮಿಕ ಶಾಲೆ ಒಡಿನ್ನಾಳ, ಸರಕಾರಿ ಪ್ರಾಥಮಿಕ ಶಾಲೆ ಕುವೆಟ್ಟು , ಸರಕಾರಿ ಪ್ರಾಥಮಿಕ ಶಾಲೆ ಸೋಣಂದೂರು , ಸರಕಾರಿ ಪ್ರಾಥಮಿಕ ಶಾಲೆ ಮಾಲಾಡಿ.
ಇದರ ಪ್ರಾಯೋಜಕರಾಗಿ ವಿನ್ಸೆಂಟ್ ಡಿಸೋಜಾ ನಾಗೋರಿ ಮಂಗಳೂರು ಹಾಗೂಝ ರೋ. ಉದಯಕುಮಾರ್ ಜೈನ ಮಡಂತ್ಯಾರು ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ರೋ. ಮ್ಯಾಕ್ಸಿಮ್ ಅಲ್ಬುಕರ್ಕ್, ಕಾರ್ಯದರ್ಶಿ ಯಾದ ರೋ. ಜಿ ವಾಸುದೇವ ಗೌಡ, ಉಪಾಧ್ಯಕ್ಷ ರೋ. ಸೆಲೆಸ್ಟಿಯನ್ ಡಿಸೋಜಾ ಮತ್ತು ಸದಸ್ಯರುಗಳಾದ ರೋ. ದಿನಕರ ಶೆಟ್ಟಿ, ರೋ. ಲಿಲ್ಲಿ ಪೈಸ್ ಭಾಗವಹಿಸಿದರು. Annette ಡಾ| ಪೃಥ್ವಿ ಜಿ ವಿ ಯವರು ಸ್ಯಾನಿಟರಿ ಪ್ಯಾಡ್ಗಳ ಬಳಸುವ ವಿಧಾನ ಮತ್ತು ಸರಿಯಾದ ವಿಸರ್ಜನೆ, ಮೇನ್ಸ್ಟ್ರುಅಲ್ ಹೈಜೀನ್, ಮೇನ್ಸ್ಟ್ರುಅಲ್ ಕಪ್ಸ್ / ಟಾಂಪಾನ್ಸ್ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.











