25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಸೋಣಂದೂರು: ಮೊದಲೆ–ಸಬರಬೈಲು–ಪಡಂಗಡಿ ಸಂಪರ್ಕ ಸೇತುವೆ ದುರಸ್ತಿಗೆ ಆಗ್ರಹ

ಮಾಲಾಡಿ: ತಾಲೂಕಿನಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮದ ಮೊದಲೆ ಸಬರಬೈಲು ಪಡಂಗಡಿ ಸಂಪರ್ಕ ಸೇತುವೆ ಮುರಿದು ಬಿದ್ದು ಸಂಪರ್ಕ ಕಡಿತಗೊಂಡಿದ್ದು.

ಈ ಸೇತುವೆಯು ಇಂದಿನವರೆಗೂ ದುರಸ್ತಿ ಆಗಿರುವುದಿಲ್ಲ. ಇದೀಗ 2024 25 ನೇ ಸಾಲಿನಲ್ಲಿ ಲೆ.ಶೀ. 5054 ರಡಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಹಾನಿಗಳಾದ ಗ್ರಾಮೀಣ ರಸ್ತೆ ಸೇತುವೆ ಹಾಗೂ ಚರಂಡಿ ಕಾಮಗಾರಿಯನ್ನು ಕೈಗೊಳ್ಳಲು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿದ್ದು ಸರ್ಕಾರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು. ಈ ಅನುದಾನದಲ್ಲಿ ಮೊದಲ ಆದ್ಯತೆಯಲ್ಲಿ ಈ ಸೇತುವೆಯನ್ನು ರಚನೆ ಮಾಡಬೇಕೆಂದು. ಮಾಲಾಡಿ ಸೋಣಂದೂರು ಪಡಂಗಡಿ ಗ್ರಾಮಸ್ಥರು ಇಂದು ಸೇತುವೆ ಕುಸಿದ ಜಾಗದಲ್ಲಿ ಪ್ರತಿಭಟನೆಯನ್ನು ಮಾಡಿದರು.

ಈ ಪ್ರತಿಭಟನೆಯಲ್ಲಿ,ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್, ಸದಸ್ಯರಾದ ಎಸ್ ಬೇಬಿ ಸುವರ್ಣ, ಬೆನಡಿಕ್ಟಾ ಮಿರಾಂದ, ಉಮೇಶ್ ಕೆಡಿಪಿ ಸದಸ್ಯ ಮೇಲ್ವಿನ್ ಸಿಕ್ವೆರಾ ಪಡಂಗಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶರೀಫ್ ಸಬರಬೈಲು, ಪ್ರಮುಖರಾದ ಹೃಷಿಕೇಶ್ ಜೈನ್ ಪಡಂಗಡಿ, ಮಹಮ್ಮದ್ ಅಲಿ ಕೋಲ್ಪೆದಬೈಲು ಮ್ಯಾಕ್ಸಿಮ್ ಸಿಕ್ವೆರಾ ಪಡಂಗಡಿ ಪ್ರಕಾಶ್ ಶೆಟ್ಟಿ, ಗೋಪಣ್ಣ ಪೂಜಾರಿ, ಬ್ಯಾಪಿಸ್ಟ್ ಕರ್ನಾಲಿಯೋ, ಶಬ್ಬೀರ್ ಕನ್ನಡಿಕಟ್ಟೆ, ಬಾಜಿಲ್ ಫೆರ್ನಾಂಡಿಸ್, ಉದಯ್ ಶೆಟ್ಟಿ ಜೆ.ಎಮ್ ಶಂಕರ್ ಮಾಲಾಡಿ, ಅಲ್ತಾಫ್ ಕೋಲ್ಪೆದಬೈಲು, ಅಹ್ಮದ್ ಪೊಮ್ಮಜೆ, ಆದಂ ಬ್ಯಾರಿ ಮೊದಲೆ, ಅಬ್ದುಲ್ ರಹಿಮಾನ್ ಮೊಧಲೆ, ಗೋಪಾಲ್ ಕೋಟ್ಯಾನ್,ಥೋಮಸ್ ಕರ್ನಾಲಿಯೋ, ಇಬ್ರಾಹಿಂ ಪಡಂಗಡಿ ಹಾಗೂ ಮಾಲಾಡಿ ಸೋಣಾಂದೂರು ಮತ್ತು ಪಡಂಗಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಕರ್ನಾಟಕ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ರಚನೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ರಝಾಕ್ ನೇಮಕ

Suddi Udaya

ಬಂದಾರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಐ.ಟಿ. ಕ್ಲಬ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ನಿವೃತ್ತ ಸೇನಾಧಿಕಾರಿ ಕುಮಾರ ಸ್ವಾಮಿ ಮತ್ತು ಕ್ಯಾಂಪ್ಕೊ ಕಂಪೆನಿಯ ಹಿರಿಯ ಮೇನೇಜರ್‌‌, ‌ನಿವೃತ್ತ ಸುಭೇದಾರ್‌ ರಂಗನಾಥ್ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸುರ್ಯ ಶ್ರೀ ಸದಾಶಿವರುದ್ರ ದೇವಾಲಯಕ್ಕೆ ಭೇಟಿ

Suddi Udaya

ಮೇ. 5-9: ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!