27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಮ್-ರೋಟರಿ ವೃತ್ತಿ ಮಾರ್ಗದರ್ಶನ ಕೇಂದ್ರವು MS Excel with Power BI” ಕುರಿತು ಹದಿನೈದು ದಿನಗಳ ತರಬೇತಿ ಕಾರ್ಯಾಗಾರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಎಸ್.ಡಿ.ಎಮ್-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು “MS Excel with Power BI” ಕುರಿತು ಮೂರು ದಿನಗಳ ಅವಧಿಯ ಐದು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತು.

ಪ್ರತಿ ಮೂರೂ ದಿನಗಳಿಗೆ ಒಂದು ತರಗತಿಯ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಅದೇ ಪ್ರಕಾರ ಬಿಕಾಂ ಮತ್ತು ಬಿ ಬಿ ಎ ಅಂತಿಮ ತರಗತಿಯ ವಿದ್ಯಾರ್ಥಿಗಳು ಒಟ್ಟು ಐದು ತರಗತಿಗಳಿಂದ ಹದಿನೈದು ದಿನಗಳ ಅವಧಿಯಲ್ಲಿ 389 ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಆರ್ಯ ಚಾಣಕ್ಯ ಟೆಕ್ನಾಲಜಿ ಲಿಮಿಟೆಡ್‌ನ ನುರಿತ ತರಬೇತುದಾರ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ನಾರಾಯಣ ಕೆ ಅವರು ಈ ತರಬೇತಿಯ ನೇತೃತ್ವ ವಹಿಸಿದ್ದರು.

ತಮ್ಮ ಉದ್ಯಮದ ಅನುಭವ ಮತ್ತು ತಾಂತ್ರಿಕ ಪರಿಣತಿಯೊಂದಿಗೆ, ನಾರಾಯಣ ಕೆ ಅವರು ವಿದ್ಯಾರ್ಥಿಗಳಿಗೆ ಡೇಟಾ ನಿರ್ವಹಣೆಗಾಗಿ MS Excel with Power BI ಪಾತ್ರ ಮತ್ತು ವ್ಯವಹಾರ ಕ್ಷೇತ್ರದಲ್ಲಿ ವರದಿ ಮಾಡಲು MS Excel with Power BI ನ ಪ್ರಾಯೋಗಿಕ ಕೌಶಲ್ಯ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ವಿನ್ಯಾಸಗೊಳಿಸಲಾದ ತರಬೇತಿಯಲ್ಲಿ ಸಮಗ್ರ ಆಧುನಿಕ ಕೈಗಾರಿಕೆಗಳಲ್ಲಿ ಬಳಸುವ ದತ್ತಾಂಶ ವಿಶ್ಲೇಷಣೆ ಮತ್ತು ವರದಿ ಮಾಡುವ ಸಾಧನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ ರವರ ಮಾರ್ಗದರ್ಶನದಲ್ಲಿ ಡಾ ನಾಗರಾಜ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದರು

Related posts

ಗುರುವಾಯನಕೆರೆ: ನಿವೃತ್ತ ಮೆಸ್ಕಾಂ ಉದ್ಯೋಗಿ ಭಾಸ್ಕರನ್ ಸ್ವಾಮಿರವರ ಪುತ್ರ ಅಯ್ಯಪ್ಪ ದಾಸ್ ನಿಧನ

Suddi Udaya

ಬೆಳ್ತಂಗಡಿ ತೆರಿಗೆ ಸಲಹೆಗಾರ ಸಂದೇಶ ರಾವ್ ರವರ ಕಛೇರಿಯು ಸ್ಥಳಾಂತರಗೊಂಡು ಶುಭಾರಂಭ

Suddi Udaya

ಅ.20 ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ ದೋಸೆಹಬ್ಬ ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

Suddi Udaya

ಮಾಲಾಡಿ ಗ್ರಾ.ಪಂ. ಗ್ರಾಮ ಸಭೆ

Suddi Udaya

ಕನ್ಯಾಡಿ: ಕುರ್ಮಾಣಿಯ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಪೆರಿಂಜೆ ಶ್ರೀ ಧ.ಮ೦.ಅ. ಪ್ರೌಢ ಶಾಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!