
ತೆಕ್ಕಾರು : ಭಾರೀ ಗಾಳಿ ಮಳೆಗೆ ತೆಕ್ಕಾರು ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ಮನೆಯ ಮೇಲ್ಚಾವಣಿ ಹಾರಿಹೋಗಿದ್ದು, ಕೆಲವು ಕಡೆ ಮರ ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿಯಾದ ಘಟನೆ ಜು. 25 ರಂದು ನಡೆದಿದೆ.

ರಸ್ತೆಗೆ ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಸ್ಥಳೀಯರು, ಮೆಸ್ಕಾಂ ಇಲಾಖೆ ಯವರು ಸೇರಿ ತೆರವು ಕಾರ್ಯ ನಡೆಸಿದರು. ಕಾಪಿಗುಡ್ಡೆಯಲ್ಲಿ ಮೂರು ಮನೆಗಳ ಮೇಲ್ಛಾವಣಿ ಹಾರಿಹೋಗಿದೆ. ಹಾಗೂ ಮನೆಗೆ ಮರ ಬಿದ್ದು ಲಲಿತ & ಗಾಯತ್ರಿ ಗೆ ಗಾಯ ಆಸ್ಪತ್ರೆ ಗೆ ದಾಖಲಾಗಿದ್ದಾರೆ.











