32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು

ನವದೆಹಲಿ: ಇಡೀ ಭರತಖಂಡದಲ್ಲಿ ೧೫೫೨ ರಿಂದ ೧೬೦೬ ರವರೆಗೆ ೫೪ ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆಯ ಐತಿಹಾಸಿಕ ಕರ‍್ಯಕ್ರಮ ನವದೆಹಲಿಯ ರಾಷ್ಟçಪತಿ ಭವನದಲ್ಲಿ ಜು.24 ರಂದು ನಡೆಯಿತು.

ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟçಪತಿಗಳು ರಾಣಿ ಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿಕೊಂಡು ರಾಷ್ಟ್ರ ದ ಗೌರವವನ್ನು ಸಲ್ಲಿಸಿದರು. ರಾಷ್ಟ್ರ ಪತಿಗಳು ತಮ್ಮ ಸಂದೇಶದಲ್ಲಿ, ರಾಣಿ ಚೆನ್ನಭೈರಾದೇವಿಯ ಧೈರ್ಯ ಸ್ಥೆರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನ ರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಮುಕ್ತಕಂಠದಿಂದ ಪ್ರಶಂಶಿಸಿದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅಭಿನಂದಿಸಿದರು.


ಕಾರ್ಯಕ್ರಮದ ಆರಂಭದಲ್ಲಿರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅತಿಥಿಗಣ್ಯರನ್ನು ಸ್ವಾಗತಿಸುತ್ತ ರಾಣಿ ಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು. ರಾಣಿ ಚೆನ್ನಭೈರಾದೇವಿ ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆ ಇಟ್ಟ ಹೆಗ್ಗುರುತು ಸ್ವರೂಪ ಎಂದು ಅವರು ಹೇಳಿದರು. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಾಗಿ ಪ್ರತಿರೋಧಿಸಿದ ರಾಷ್ಟಿçÃಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು.

ರೈತರು ಮತ್ತು ಮೀನುಗಾರರ ನೆಮ್ಮದಿಗೆ ಹಲವಾರು ಸಾಮಾಜಿಕ ಸೌಲಭ್ಯಗಳನ್ನು ನೀಡಿದಳು ಎಂಬುದನ್ನು ಜೋಷಿ ತಿಳಿಸಿದರು. ಇಂತಹ ಮಹಾನ್ ಮಹಿಳೆಯ ನೆನಪಿಗಾಗಿ ಸ್ಮಾರಕ ಅಂಚೆಪಟ್ಟಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು. ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕರ‍್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಣಿ ಚೆನ್ನಭೈರಾದೇವಿಯ ಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕರ‍್ಯಗಳನ್ನು ನೆನಪಿಸಿ ಗೌರವ ಸೂಚಿಸಿದರು. ಅಲ್ಲದೆ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿಯನ್ನು ಹಾಗೂ ಇಂದಿನ ಕರ‍್ಯಕ್ರಮವನ್ನು ಎಕ್ಸಲೆಂಟ್ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ ಇದರ ಮೂಲಕ ಪ್ರಾಯೋಜಿಸಲಾಗಿದೆ ಎಂಬುದನ್ನೂ ಅವರು ವಿವರಿಸಿದರು.
ಕರ‍್ಯಕ್ರಮಕ್ಕೆ ಮಾರ್ಗದರ್ಶನ ನೀಡಿಸಹಕರಿಸಿದವ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರು “ರಾಜ್ಯ ವಿಸ್ತರಣೆ ರಾಣಿ ಚೆನ್ನ ಭೈರಾದೇವಿಯರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯ ಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು. ತನ್ನರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿಅಪಾರ ಪ್ರಮಾಣದ ವಿದೇಶೀ ವಿನಿಮಯಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆ ಉತ್ತಮ ವ್ಯಾವಹಾರಿಕ ಸಂಬಂಧ ಇರಿಸಿಕೊಂಡು, ಅವರಿಂದಲೇ “ರೈನಾದ ಪೆಮೆಂಟಾ” ಅರ್ಥಾತ್ “ಕರಿಮೆಣಸಿನ ಅರಸಿ” ಎಂಬ ಬಿರುದು ಪಡೆದಿದ್ದಳು .ಅಂಥ ಹೆಮ್ಮೆಯ ವೀರವನಿತೆಗೆಇಂದುದೇಶದದೊಡ್ಡಗೌರವ ಪ್ರಾಪ್ತವಾಗಲಿದೆ” ಎಂದು ಆಶಿಸಿದರು.


ಅಂಚೆ ಚೀಟಿ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಉಪಸ್ಥಿತರಿದ್ದು ಶುಭಕೋರಿದರು.
ಕರ‍್ಯಕ್ರಮದಲ್ಲಿ ದೆಹಲಿಯ ಅಂಚೆ ಮಹಾನಿರ್ದೇಶಕರಾದ ಶ್ರೀ ಅಖಿಲೇಶ್‌ಕುಮಾರ್ ಪಾಂಡಿಯವರು, ಹುಬ್ಬಳ್ಳಿಯ ಸಾಮಾಜಿಕ ಕರ‍್ಯಕರ್ತರಾದ ಶ್ರೀ ಮಹೇಂದ್ರ ಸಿಂಗ್, ಕರಿಮೆಣಸಿನ ರಾಣಿ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ಖ್ಯಾತ ಲೇಖಕರಾದ ಡಾ.ಗಜಾನನ ಶರ್ಮ, ಸಂಯೋಜಕರಾದ ಹುಬ್ಬಳ್ಳಿಯ ಖ್ಯಾತ ಉದ್ಯಮಿ ಶ್ರೀ ಮಹಾವೀರ ಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರೂ ಕರ‍್ಯಕ್ರಮ ಸಂಯೋಜಕರೂ ಆದ ಡಾ. ಬಿ.ಪಿ.ಸಂಪತ್‌ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತುಇತರಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.


ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪ್ರಕಟಿಸಿದ ರಾಣಿ ಚೆನ್ನಭೈರಾದೇವಿಯ ಅಂಚೆ ಚೀಟಿ ಬಿಡುಗಡೆ ಸಮಾರಂಭವು ಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಪಡೆಯುವಲ್ಲಿ ಸಾರ್ಥಕತೆಯನ್ನು ಪಡೆಯಿತು. ಇತಿಹಾಸದಗರ್ಭದಲ್ಲಿ ಮರೆಯಾಗಿದ್ದ ಮಹಾನ್ ಚೇತನವೊಂದಕ್ಕೆ ಗೌರವ ನೀಡುವ ಹಾಗೂ ಹೊಸತಲೆಮಾರಿನಲ್ಲಿ ರಾಣಿಯ ಪೌರುಷ, ರಾಜನೀತಿ, ದೂರದೃಷ್ಟಿಯ ಆಡಳಿತ, ನಾಡಪ್ರೇಮ, ಸಂಸ್ಕೃತಿ ಪ್ರೀತಿ ಮೊದಲಾದ ನೆನಪುಗಳನ್ನು ಪುನರ್ ಸ್ಥಾಪಿಸುವ ರಾಷ್ಟ್ರಭಕ್ತಿಯ ಪ್ರತೀಕವಾಗಿಯೂ ಗಮನಸೆಳೆಯಿತು.

Related posts

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಅವರನ್ನು ಅಭಿನಂದಿಸಿದ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ ಮುಹಮ್ಮದ್ ಹನೀಫ್

Suddi Udaya

ಮಡಂತ್ಯಾರಿನಲ್ಲಿ ಕ್ಲಾಸಿಕ್ ಮೆನ್ಸ್ ವೇರ್ ಶುಭಾರಂಭ

Suddi Udaya

ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ’ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪಡoಗಡಿ-ಹಚ್ಚಾಡಿ -ಬಳಂಜ ಸಂಪರ್ಕ ಕಿರುಸೇತುವೆಯಲ್ಲಿ ತ್ಯಾಜ್ಯ ಶೇಖರಣೆ

Suddi Udaya

ಕಲ್ಮಂಜ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!