ಬೆಳ್ತಂಗಡಿ: ಶೈಕ್ಷಣಿಕ ಕ್ಷೇತ್ರದ ಯುವ ಸಾಧಕ, ವಿಜಯರತ್ನ ಪ್ರಶಸ್ತಿ ಪುರಸ್ಕೃತರ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರನ್ನು ಬಳಂಜ ಶಿಕ್ಷಣ ಟ್ರಸ್ಟ್ ,ಶಾಲಾಬಿವೃದ್ದಿ ಸಮಿತಿ ಬಳಂಜ ಮತ್ತು ಇತರ ಸಂಘ ಸಂಸ್ಥೆಗಳ ವತಿಯಿಂದ ಎಕ್ಸೆಲ್ ಕಾಲೇಜು ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ಜು. 26 ರಂದು ಅಭಿನಂದಿಸಲಾಯಿತು.
ಬಳಂಜ ಹೈಸ್ಕೂಲ್ ನ ಮುಖ್ಯೋಪಾಧ್ಯಾಯಿನಿ ಸುಲೋಚನಾ ಮಾತನಾಡಿ ಸರಕಾರಿ ಶಾಲಾ ತಾಲೂಕು ಮಟ್ಟದ ಕ್ರೀಡೋತ್ಸವಕ್ಕೆ ಸುಮಂತ್ ಕುಮಾರ್ ಜೈನ್ ರವರು ತುಂಬಾ ಪ್ರೋತ್ಸಾಹ ನೀಡಿ ಸರಕಾರಿ ಶಾಲಾ ಮಕ್ಕಳ ಬೆಳವಣಿಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ನಾನು ಸರಕಾರಿ ಶಾಲೆ ಮತ್ತು ಉಜಿರೆ ಸಿದ್ದವನದಲ್ಲಿ ಶಿಕ್ಷಣ ಪಡೆದಿದ್ದು ಅಲ್ಲಿನ ಶಿಕ್ಷಣ ಈ ಸಾಧನೆಗೆ ಕಾರಣವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಉತ್ತಮ ವೈದ್ಯರಾಗಬೇಕು, ಇಂಜಿನಿಯರ್ ಆಗಬೇಕು ಎಂಬುದೇ ಎಕ್ಸೆಲ್ ಕಾಲೇಜಿನ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ಇದರ ಅದ್ಯಕ್ಷ ಮನೋಹರ್ ಬಳಂಜ, ಕಾರ್ಯದರ್ಶಿ ರತ್ನರಾಜ್ ಪೇರಂದಬೈಲ್, ಟ್ರಸ್ಟಿ ಪ್ರಮೋದ್ ಕುಮಾರ್ ಜೈನ್, ಶಾಲಾಬಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತರಿದ್ದರು.











