September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 2644 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

ಬೆಳ್ತಂಗಡಿ: ಮೇ 10ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಹಲವಾರು ಕ್ಷೇತ್ರಗಳ ಮತ ಎಣಿಕೆ ಮೇ 13ರಂದು ಬೆಳಿಗ್ಗೆ 8 ಗಂಟೆ ಯಿಂದ ಮಂಗಳೂರಿನ ಸುರತ್ಕಲ್ ಎನ್.ಐ.ಟಿ.ಕೆ. ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿದೆ.

ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆದು ನಂತರ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ನಡೆಯುತ್ತಿದೆ.

ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗೇಶ್ ಎಚ್.ಟಿ. ಮತ್ತು ಉಪಚುನಾವಣಾಧಿಕಾರಿ ಸುರೇಶ್ ಕುಮಾರ್ ಸಮ್ಮುಖದಲ್ಲಿ ಬೆಳ್ತಂಗಡಿ ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಸಾವಿರಾರು ಮಂದಿ ಮಂಗಳೂರಿಗೆ ತೆರಳಿದ್ದಾರೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ ಸಾಧಿಸಿದ್ದಾರೆ. 2644 ಮತಗಳ ಮತಗಳ ಮೂಲಕ ಮುನ್ನಡೆ ಸಾಧಿಸಿದ್ದಾರೆ.

Related posts

ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ಸೆ.16: ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

Suddi Udaya

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಕೊಕ್ಕಡ: ಜೇಸಿ ಆಡಳಿತ ಸಭೆ: ಚುನಾವಣೆ ಅರಿವು ಆಂದೋಲನ ಕಾರ್ಯಕ್ರಮ

Suddi Udaya

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ:ಆರೋಪಿಗೆ ನ್ಯಾಯಾಂಗ ಬಂಧನ

Suddi Udaya

ಬೆಳ್ತಂಗಡಿ: ತಾಲೂಕು ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

Suddi Udaya
error: Content is protected !!