22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಭಿವೃದ್ಧಿ ಕಾಮಗಾರಿಗಳಿಗೆ ದ.ಕ. ಜಿಲ್ಲೆಯ 15 ಬ್ಲಾಕ್‌ಗಳ ಮರಳು ದಾಸ್ತಾನನ್ನು ಆ್ಯಪ್ ಮೂಲಕ ಪೂರೈಸಲು ಅವಕಾಶ: ಜಿಲ್ಲಾ ಮರಳು ಉಸ್ತುವಾರಿ ಸಮಿತಿ

ಮಂಗಳೂರು : ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆ‌ರ್ ಝಡ್ ಪ್ರದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‌ಗಳಲ್ಲಿನ ಮರಳು ದಾಸ್ತಾನನ್ನು ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ‘DK SAND BAZAAR APP’ ಮೂಲಕ ಪೂರೈಸಲು ತೀರ್ಮಾನಿಸಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ದ.ಕ. ಜಿಲ್ಲಾಧಿಕಾರಿಯವರು ಸೂಚಿಸಿರುವಂತೆ, ಸದರಿ ಮರಳನ್ನು ಸಾಗಾಟ ಮಾಡಲು ಇಚ್ಚಿಸುವವರು ತಮ್ಮ ವಾಹನವನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಿರುವ ‘DK SAND BAZAAR APP’ ನಲ್ಲಿ ನೋಂದಾಯಿಸಿಕೊಳ್ಳಲು ಈಗಾಗಲೇ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಮಾರ್ಚ್ 16- 2025 ರಿಂದ DK SAND BAZAAR APP ಮುಖಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ/ ಅಭಿವೃದ್ಧಿ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕಾರ್ಯ ಪ್ರಾರಂಭಗೊಂಡಿದ್ದು ಮರಳು ಅವಶ್ಯಕತೆ ಇರುವವರು Online ಮುಖಾಂತರ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

15 ಮರಳು ಬ್ಲಾಕ್‌ಗಳಲ್ಲಿ 3,30,405 ಮೆ.ಟನ್ ಪರಿಸರ ವಿಮೋಚನಾ ಪತ್ರದಲ್ಲಿ ಮರಳು ಗಣಿಗಾರಿಕೆ ಕಾರ್ಯಾಚರಿಸಲು ಲಭ್ಯವಿದ್ದು, ಪರಿಸರ ವಿಮೋಚನಾ ಪತ್ರದನ್ವಯ ಪ್ರತಿ ವರ್ಷ ಜೂನ್ 5 ರಿಂದ ಅಕ್ಟೋಬರ್ 15 ರವರೆಗೆ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಿಷೇಧವಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಗಣಿ ಗುತ್ತಿಗೆ ಪ್ರದೇಶದಲ್ಲಿ ನಿಷೇಧವಿರುತ್ತದೆ. ಮರಳು ದಾಸ್ತಾನು ಕೇಂದ್ರಗಳಲ್ಲಿ ಲಭ್ಯವಿರುವ ಒಟ್ಟು 27,550 ಮೆ.ಟನ್ ಗಳಲ್ಲಿ ಮಾರ್ಚ್ 2025ರಿಂದ ಇದುವರೆಗೆ 12,126 ಮೆ.ಟನ್ ಅನ್ನು ಬುಕಿಂಗ್ ಆಪ್ ಮುಖಾಂತರ ವಿತರಿಸಲಾಗಿದೆ. ಅಲ್ಲದೆ ಮರಳು ಗಣಿ ಗುತ್ತಿಗೆ ದಾಸ್ತಾನು ಕೇಂದ್ರದಲ್ಲಿ ಲಭ್ಯವಿರುವ 15,424 ಮೆ.ಟನ್ ಮರಳನ್ನು ಬುಕಿಂಗ್ ಮಾಡಲು dksandbazaarcom ವೆಬ್‌ಸೈಟ್‌ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Dk sand bazaar ಬುಕಿಂಗ್‌ನಲ್ಲಿ ಯಾವುದೇ ತಾಂತ್ರಿಕ ತೊಂದರೆ ಇದ್ದಲ್ಲಿ ದೂರವಾಣಿ/ಮೊಬೈಲ್ ನಂ. 6364019555 ಅನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ದ.ಕ. ಜಿಲ್ಲೆ ಇವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಯೂನಿಯನ್ ಬೆಳ್ತಂಗಡಿ ವತಿಯಿಂದ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆ: ಜೆಸಿಐ ಬೆಳ್ತಂಗಡಿಯಿಂದ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರಕ್ಕೆ ಭೇಟಿ

Suddi Udaya

ಪಟ್ರಮೆ: ಪಾದೆಯಲ್ಲಿ ಧರೆ ಕುಸಿತ: ಮನೆಗೆ ಹಾನಿ

Suddi Udaya

ಕೆದ್ದುನಲ್ಲಿ ಕಾರು ಡಿಕ್ಕಿ:ಬೈಕ್ ಸವಾರಿಬ್ಬರಿಗೆ ಗಾಯ

Suddi Udaya

ಶಿರ್ಲಾಲು ರಿಕ್ಷಾ ಮಾಲಕ -ಚಾಲಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ವೇಣೂರು ಮಹಾಮಸ್ತಕಾಭೀಷೇಕ ಮಹೋತ್ಸವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಮಂತ್ರಣ

Suddi Udaya
error: Content is protected !!