ಕುವೆಟ್ಟು: ಇಲ್ಲಿನ ಮೊದಲೆ ಎಂಬಲ್ಲಿ ಜಡಿ ಮಳೆಗೆ ರಸ್ತೆಯೆ ಕೊಚ್ಚಿಕೊಂಡು ಹೋಗಿದೆ. ಮದ್ದಡ್ಕದಿಂದ ಪಡಂಗಡಿಗೆ ಸಂಪರ್ಕ ರಸ್ತೆಯ ಕುದ್ರೆಂಜ ಸಮೀಪ ರಸ್ತೆ ಕಳೆದ ಬಾರಿಯ ಮಳೆಗೆ ಕೊಚ್ಚಿಹೋಗಿತ್ತು.

ಈ ಬಾರಿ ಕೇವಲ ನೂರು ಮೀಟರ್ ಅಂತರದಲ್ಲಿ ರಸ್ತೆ ಮತ್ತೆ ಕೊಚ್ಚಿಕೊಂಡು ಹೋಗಿದೆ.ಕಳೆದ ಬಾರಿ ಕೊಚ್ಚಿಕೊಂಡು ಹೋದ ರಸ್ತೆಯ ರಿಪೇರಿ ಮಣ್ಣು ಹಾಕಿ ಮಾಡಿರುವುದರಿಂದ ಅದು ಕೊಚ್ಚಿಕೊಂಡು ಹೋಗಿದೆ.
ಈಗ ಸ್ಥಳೀಯರು ಸಂಪರ್ಕಕ್ಕೆ ಸಮಸ್ಯೆ ಕಾಡಿದೆ. ಶಾಲಾ ಮಕ್ಕಳು, ನಿತ್ಯ ಓಡಾಡುವ ಸಾವ೯ಜನಿಕರು ಕಾಮಗಾರಿಯ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.











