ಮರೋಡಿ: ವಿವಾಹಿತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರೋಡಿಯಲ್ಲಿ ಜು. 28 ರಂದು ನಡೆದಿದೆ. ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.
ಕಳೆದೊಂದು ವರ್ಷದ ಹಿಂದೆ ಮದುವೆಯಾಗಿದ್ದು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎನ್ನಲಾಗಿದೆ.ವಿಪರೀತ ಹೊಟ್ಟೆನೋವೆಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ಅವರ ದೊಡ್ಡಮ್ಮರವರಿಗೆ ಅನುಮಾನ ಬಂದು ತಕ್ಷಣ ಅವರ ಪತಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ.ಎಲ್ಲರ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.











