32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆ: ನೂತನ ಸಮಿತಿ ರಚನೆ

ಅಳದಂಗಡಿ : ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಜು. 22ರಂದು ಶ್ರೀ ಗುರು ಸಭಾಭವನದಲ್ಲಿ ವಲಯದ ಅಧ್ಯಕ್ಷ ಹರೀಶ್ ಟೈಲರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ ಮಾತನಾಡಿ ಕ್ಷೇತ್ರದ ಆಟಿಡೊಂಜಿ ದಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಜಯಂತ್ ಉರ್ಲಾ೦ಡಿ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಶಾಂಭವಿ ಬಂಗೇರ, ಜಿಲ್ಲಾ ಸಮಿತಿಯ ಸದಸ್ಯರುಗಳಾದ ಕುಶಾಲಪ್ಪ ಗೌಡ ರಾಜು ಪೂಜಾರಿ, ವಸಂತ ಬೆಳ್ತಂಗಡಿ ,ಪ್ರಶಾಂತ್ ಟೈಲರ್ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ , ಉಜಿರೆ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ರವೀಂದ್ರ ಟೈಲರ್, ಬೆಳ್ತಂಗಡಿ ವಲಯದ ಅಧ್ಯಕ್ಷರು, ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು .

ಸಭೆಯಲ್ಲಿ ವಲಯದ ಸದಸ್ಯರ ಗುರುತಿನ ಕಾರ್ಡ್ ವಿತರಣೆ ಹೊಸ ಸದಸ್ಯರ ನೋಂದಾವಣೆ ಮತ್ತು ನವೀಕರಣ ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮವು ದೇಜಪ್ಪ ಟೈಲರ್ ಶಿರ್ಲಾಲು ಇವರ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೇಖಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಜೆಇಇ ಪರೀಕ್ಷೆಯಲ್ಲಿ ಇಂಡಿಯಾದಲ್ಲಿ 1542 ನೇ ರ್‍ಯಾಂಕ್ ಪಡೆದ ವಲಯದ ಸದಸ್ಯರಾದ ಮೋಹನ್ ದಾಸ್ ರವರ ಪುತ್ರ ಅಚಿಂತ್ಯದಾಸ್ ರವರನ್ನು ಸನ್ಮಾನಿಸಲಾಯಿತು.

ಈ ವೇಳೆ ವಲಯದ ರಾಜು ಪೂಜಾರಿ ಜಿಲ್ಲಾ ಸಮಿತಿ ಸದಸ್ಯರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ವಿನೂಷ ಪ್ರಕಾಶ್, ಕಾರ್ಯದರ್ಶಿಯಾಗಿ ಜಗನ್ನಾಥ ಟೈಲರ್ ಸುಲ್ಕೇರಿ ಮೊಗ್ರು, ಕೋಶಾಧಿಕಾರಿಯಾಗಿ ರೇಖಾ ಅಳದಂಗಡಿ, ಉಪಾಧ್ಯಕ್ಷರುಗಳಾಗಿ ಸುರೇಂದ್ರ, ರೇವತಿ ಜೊತೆ ಕಾರ್ಯದರ್ಶಿ, ಅಕ್ಷಯ್ ಮತ್ತು ಪ್ರತಿಮ ಆಯ್ಕೆ ಮಾಡಲಾಯಿತು.

ಕ್ಷೇತ್ರ ಸಮಿತಿಗೆ ಮೋಹನ್ ದಾಸ್ ,ರಾಜು ಪೂಜಾರಿ, ಲಾನ್ಸಿ ಡಿಸೋಜಾ ಹರೀಶ್ ಟೈಲರ್ ,ಜನಿತ ಕುದ್ಯಾಡಿ , ಸಂಘಟನಾ ಕಾರ್ಯದರ್ಶಿಯಾಗಿ ಶಾಂತಿ ಮಮತಾ, ಶೋಭಾ, ಪವಿತ್ರ ಸಕೇತಾ ಪಿಲ್ಯ, ಮಲ್ಲಿಕಾ ,ಶಕುಂತಲಾ ,ಸವಿತಾ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ 92 ಮಂದಿ ಟೈಲರ್ ವೃತ್ತಿ ಬಾಂಧವರು ಭಾಗವಹಿಸಿದ್ದರು ಮೋಹನ್ ದಾಸ್ ನಿರೂಪಿಸಿ ಲಾನ್ಸಿ ಡಿಸೋಜಾ ವರದಿ ವಾಚಿಸಿ ಜಗನ್ನಾಥ ಟೈಲರ್ ಧನ್ಯವಾದವಿತ್ತರು.

Related posts

ಸರಳಿಕಟ್ಟೆ ಸ.ಹಿ.ಪ್ರಾ. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಯಯ್ಯ, ಉಪಾಧ್ಯಕ್ಷರಾಗಿ ಜುಬೈದ ಆಯ್ಕೆ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿ ವಿ.ಹಿಂ.ಪ. ಸಮಿತಿ ಪ್ರಧಾನಕಾರ್ಯದರ್ಶಿ ಗೋಪಾಲ್ ಜಿ. ಭೇಟಿ

Suddi Udaya

ಗೇರುಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ.93.47 ಫಲಿತಾಂಶ

Suddi Udaya

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಸಮೃದ್ಧ್ ಬಿ.ಎಸ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಸುದ್ದಿ ಉದಯ ಪತ್ರಿಕೆ ಹಾಗೂ ದೀಪಾವಳಿ ವಿಶೇಷಾಂಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿತ್ರನಟಿ ಶ್ರುತಿ

Suddi Udaya
error: Content is protected !!