
ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಧಾರ್ಮಿಕ ಧತ್ತಿ ಇಲಾಖೆಯಿಂದ ರೂ.4 ಲಕ್ಷ ಮಂಜೂರುಗೊಳಿಸಿ ನಾಗದೇವರ ಕ್ಷೇತ್ರದ ಶೀಟ್ ಹಾಗೂ ಇಂಟರ್ ಲಾಕ್ ಅಳವಡಿಸಿದ್ದು ಇದರ ಉದ್ಘಾಟನೆಯನ್ನು ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ರವರು ನೇರವೇರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾದ ಯೋಗೀಶ್ ಕುಮಾರ್ ಕೆ.ಎಸ್, ಗೋಪಾಲಕೃಷ್ಣ ತಂತ್ರಿಗಳು, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್, ಪ್ರಗತಿಪರ ಕೃಷಿಕ ಕಿಶೋರ್ ಕುಮಾರ್ ಕುರ್ತೋಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಕಾರ್ಯದರ್ಶಿ ಶ್ರೀಮತಿ ಮಧುರ ರಾಘವ ಅತ್ತೋಡಿ, ಕೋಶಾಧಿಕಾರಿ ಹರ್ಷ ಹೆಚ್.ಆರ್.ಪಕ್ಕಿದಕಲ, ಸದಸ್ಯರಾದ ಶ್ರೀಮತಿ ಜಯಂತಿ ಪಕ್ಕಿದಕಲ, ಗಿರೀಶ್ ಕುಮಾರ್ ಒಡ್ಯಾಣೆ, ಸೋಮಪ್ಪ ಪೂಜಾರಿ ಅಡ್ಕದಬೈಲು, ಬೋಜ ಪೂಜಾರಿ ನಡುವಡ್ಕ, ಅವಿನಾಶ್ ಕುರ್ತೋಡಿ, ಗುರುಕಿರಣ್ ಮೇಲಂತಬೆಟ್ಟು ಪದ್ಮರಾಜ ಕೆಲ್ಲಕೆರೆ, ಪ್ರ.ಅರ್ಚಕರಾದ ಅನಂತ ಇರ್ವತ್ರಾಯ ಹಾಗೂ ಭಕ್ತರು ಉಪಸ್ಥಿತರಿದ್ದರು.











