38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಂಜಿತ್ ಎಚ್ ಡಿ ಬಳಂಜರವರಿಗೆ ಜೆಸಿಯ ವಲಯ 15ರ ಸಾಧನಾ ಶ್ರೀ ಪ್ರಶಸ್ತಿ

ಬೆಳ್ತಂಗಡಿ:ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೆಸಿಐ ಭಾರತದ ವಲಯ 15 ರ ವ್ಯವಹಾರ ಸಮ್ಮೇಳನವು ಜೆಸಿಐ ಮಡoತ್ಯಾರು ಘಟಕದ ಆತಿಥ್ಯದಲ್ಲಿ ಸೆಕ್ರೆಡ್ ಹಾರ್ಡ್ ಚರ್ಚ್ ಹಾಲ್ ನಲ್ಲಿ ನಡೆಯಿತು.

ಪ್ರಸ್ತುತ ಸಾಲಿನ ವಲಯ ಉಪಾಧ್ಯಕ್ಷರು ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನಿಕಟ ಪೂರ್ವಧ್ಯಕ್ಷರು ಆಗಿರುವ ಜೆಸಿ ರಂಜಿತ್ ಎಚ್ ಡಿ ಬಳಂಜರವರು ವ್ಯವಹಾರ ಸಮೇಳನದಲ್ಲಿ ತನ್ನ ವೃತ್ತಿ ಕ್ಷೇತ್ರ ಮತ್ತು ಜೆಸಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಲ್ಲಿಸಿರುವ ಸೇವೆಗಾಗಿ ವಲಯ 15 ರಿಂದ ಕೊಡಮಾಡುವ 2025 ನೇ ಸಾಲಿನ ಪ್ರತಿಷ್ಟಿತ ಸಾಧನಾಶ್ರೀ ಪ್ರಶಸ್ತಿ ಯನ್ನು ಸ್ವೀಕರಿಸಿದರು.

2015ರಲ್ಲಿ ಜೆಸಿಐ ಬೆಳ್ತಂಗಡಿಯ ಮೂಲಕ ಜೆಸಿಐ ಸಂಸ್ಥೆಗೆ ಸೇರ್ಪಡೆಗೊಂಡ ಇವರು 2017ರಲ್ಲಿ ಕಾರ್ಯದರ್ಶಿಯಾಗಿ, ವಲಯ ತರಬೇತುದಾರರಾಗಿ, 2024ರಲ್ಲಿ ಘಟಕ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಕಳೆದ ವರ್ಷದ ವಲಯ ಸಮ್ಮೇಳನದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯೊಂದಿಗೆ ಪುರಸ್ಕೃತಗೊಂಡಿದ್ದರು.

ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರಾಗಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ ಬಳಂಜದ ಜೊತೆ ಕಾರ್ಯದರ್ಶಿಯಾಗಿ, ಹಳೆ ವಿದ್ಯಾರ್ಥಿ ಸಂಘ ಬಳಂಜ, ಮತ್ತು ಬಳಂಜ ವಾಲಿಬಾಲ್ ಕ್ಲಬ್ ನೊಂದಿಗೆ ಕಾರ್ಯನಿರ್ವಹಿಸಿ, ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ (MITE) ಮೂಡಬಿದ್ರಿಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಅಭಿಲಾಶ್ ಬಿ ಎ, ಪೂರ್ವ ವಲಯ ಅಧ್ಯಕ್ಷರುಗಳಾದ ಸಂಪತ್ ಬಿ ಸುವರ್ಣ, ಕಾರ್ತಿಕೇಯ ಮಧ್ಯಸ್ಥ, ಗಿರೀಶ್ ಎಸ್ ಪಿ, ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ, ಸುಹಾಸ್ ಮರಿಕೆ, ಪ್ರಶಾಂತ್ ಕುಮಾರ್, ಅನ್ವೇಶ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಿಕರಾದ ಅಶೋಕ್ ಗುಂಡಿಯಲ್ಕೆ, ಮಡಂತ್ಯಾರ್ ಘಟಕದ ಅಧ್ಯಕ್ಷರಾದ ಅಮಿತಾ ಅಶೋಕ್, ವಿಕೇಶ್ ಮಾನ್ಯ, ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಆಶಾಲತಾ ಪ್ರಶಾಂತ್, ಪೂರ್ವ ಅಧ್ಯಕ್ಷರುಗಳಾದ ತುಕಾರಾಮ್, ನಾರಾಯಣ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿಯಾದ ಪ್ರಮೋದ್ ಕೆ, ಶ್ರುತಿ ರಂಜಿತ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮಡಂತ್ಯಾರು ವಲಯದ ಬಸವನಗುಡಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಶಿರ್ಲಾಲು ರಿಕ್ಷಾ ಚಾಲಕ -ಮಾಲಕ ಸಂಘದಿಂದ ಆಯುಧ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ನಾರಾವಿ ಗ್ರಾ.ಪಂ ನಲ್ಲಿ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ಉಜಿರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಎಮ್. ಗೋಪಾಲಕೃಷ್ಣ ಶೆಟ್ಟಿ (ಎಂ.ಜಿ ಶೆಟ್ಟಿ ) ನಿಧನ

Suddi Udaya

ಉಜಿರೆ ಗುರಿಪಳ್ಳ -ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

Suddi Udaya
error: Content is protected !!