September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಗುರಿಪಳ್ಳ -ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ

ಉಜಿರೆ ಗುರಿಪಳ್ಳ ಇಂದಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟ ಪರಿಣಾಮ ಜಿಲ್ಲಾಧಿಕಾರಿಗಳ ಆದೇಶದಂತೆ ಘನವಾಹನ ಸಂಚಾರ ನಿಷೇಧಿಸಿದ ಪರಿಣಾಮ ಈ ರಸ್ತೆಯ ಮೂಲಕ ಸಂಚರಿಸುವ ಪ್ರಮುಖವಾಗಿ ಶಾಲಾ ಮಕ್ಕಳಿಗೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿರುತ್ತದೆ.

ಈ ಬಗ್ಗೆ ಶಾಸಕ ಹರೀಶ್ ಪೂಂಜ ರವರ ಗಮನಕ್ಕೆ ತಂದು ಅವರ ಸೂಚನೆಯಂತೆ ಕೆ ಎಸ್ ಆರ್ ಟಿ ಸಿ ಘಟಕದ ಅಧಿಕಾರಿಗಳನ್ನು ಬೇಟಿಯಾಗಿ ಬಸ್ ವ್ಯವಸ್ಥೆಯನ್ನು ಪರ್ಯಾಯ ರಸ್ತೆಯಾದ ಗುರಿಪಳ್ಳ-ಕಜೆ ಶಾಂತಿನಗರ-ಇಂದಬೆಟ್ಟು-ಬೆಳ್ಳೂರಬೈಲು-ಕಾನರ್ಪ-ಸೊಮಂತಡ್ಕ-ಉಜಿರೆ ಮೂಲಕ ಒದಗಿಸಿಕೊಡುವಂತೆ ಶಾಸಕರ ಸೂಚನೆಯಂತೆ ಜು. 04 ರಂದು ಅಧಿಕಾರಿಗಳಿಗೆ ತಿಳಿಸಲಾಯಿತು. ಮತ್ತು ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಬಸ್ ಬರುವ ಸಮಯವನ್ನು ನಿಗದಿ ಪಡಿಸಲು ಸೂಚಿಸಲಾಯಿತು. ವಾಸ್ತವ ವಿಷಯ ತಿಳಿದ ಅಧಿಕಾರಿಗಳು ಬಸ್ ವ್ಯವಸ್ಥೆ ಸರಿಯಾದ ಸಮಯಕ್ಕೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಡ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದಿವಾಕರ ಕರ್ಕೆರ, ಹಿರಿಯರಾದ ಜಯಂತ್ ಗೌಡ ಗುರಿಪಳ್ಳ, ವಿನಯ್ ಕೆ ಗುರಿಪಳ್ಳ ಉಪಸ್ಥಿತರಿದ್ದರು,

Related posts

ಎಸ್ ಬಿಐ ಲೈಫ್ ಕಾರ್ಕಳ ಬ್ರಾಂಚ್ ನ ಮಂಜುನಾಥ ಗುಡಿಗಾರ್ ರವರಿಗೆ “ಜ್ಯುವೆಲ್ ಆಫ್ ಎಸ್ ಬಿಐ ಲೈಫ್” ಪ್ರಶಸ್ತಿ

Suddi Udaya

ನ.24: ಅಳದಂಗಡಿಯಲ್ಲಿ ತೃಷಾ ಮೆಡಿಕಲ್ಸ್ ಶುಭಾರಂಭ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ, ಅಮೆರಿಕ – ನಾರ್ಥ್ ಕೆರೊಲಿನಾ ವಿವಿ ವೈದ್ಯಕೀಯ ವಿದ್ಯಾರ್ಥಿಗಳ ಭೇಟಿ

Suddi Udaya

ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಬಗರ್ ಹುಕ್ಂ ಅಕ್ರಮ ಸಕ್ರಮ ಸಮಿತಿ ಸಭೆ

Suddi Udaya

ಬೈಲಂಗಡಿ ಅರಮನೆಯ ನೇರೊಳ್ದಡಿ ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ನೇಮೋತ್ಸವ

Suddi Udaya
error: Content is protected !!