ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳದಲ್ಲಿ ಮನೋವಿಜ್ಞಾನ ವಿಭಾಗ
ಎಸ್‌ಡಿಎಂ ಕಾಲೇಜು ಉಜಿರೆ (ಸ್ವಾಯತ್ತ) ಇದರ ಸಂಯುಕ್ತ ಆಶಯದೊಂದಿಗೆ ಸ್ವಾಸ್ಥ್ಯ ಮನಸ್ ಶಿಕ್ಷಾ ಎಂಬ ಶೀರ್ಷಿಕೆ ಅಡಿಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದ ಸಂಘಟಕರಾದ ಶ್ರೀಮತಿ ಪದ್ಮಶ್ರೀ. ಕೆ ಸಹಾಯಕ ಪ್ರಾಧ್ಯಾಪಕರು ಮನೋವಿಜ್ಞಾನ ವಿಭಾಗ
ಎಸ್‌ಡಿಎಂ ಕಾಲೇಜು ಉಜಿರೆ (ಸ್ವಾಯತ್ತ) ಇವರು ಆಗಮಿಸಿದ್ದರು. ಇವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮನೋವಿಜ್ಞಾನ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ ಇಲ್ಲಿನ ವಿದ್ಯಾರ್ಥಿಗಳು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಗಾರದಲ್ಲಿ ವಿದ್ಯಾರ್ಥಿಗಳ ಮನಸ್ಸಿನ ಹಿಡಿತ, ಓದಿನ ಕಡೆಗಿನ ಗಮನ ,ಸಮಯದ ಸದುಪಯೋಗ ಹಾಗೂ ಅದನ್ನ ಉಪಯೋಗಿಸುವ ಕಲೆ, ಜೊತೆಗೆ ವಿದ್ಯಾರ್ಥಿಗಳ ಸಾಧನೆಗೆ ಇರುವ ವಿವಿಧ ದಾರಿಗಳು ಇತ್ಯಾದಿಗಳ ಕುರಿತಾಗಿ ಹಲವಾರು ಉದಾಹರಣೆ, ಚಟುವಟಿಕೆ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಈ ಕಾರ್ಯಕ್ರಮದ ಕುರಿತಾಗಿ ಹಾಗೂ ಇದರ ಅಗತ್ಯತೆಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. . ಶಾಲಾ ವಿದ್ಯಾರ್ಥಿನಿ ಕುಮಾರಿ ನಿವೇದ್ಯಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕುಮಾರಿ ತನ್ವಿ ಸ್ವಾಗತಿಸಿ, ವಿಜಯ್ ಸಂಘಟಕರ ಕಿರುಪರಿಚಯವನ್ನು ನೀಡಿ ಕುಮಾರಿ ಸಿಂಧೂರ ಧನ್ಯವಾದವಿತ್ತರು.











