ಬೆಳ್ತಂಗಡಿ: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ವಾರ್ಷಿಕ ಮಹಾಸಭೆ ಹಾಗೂ ಸಮಿತಿ ರಚನೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಇ.ಎ ರಾಜ್ಯ ಉಪಾಧ್ಯಕ್ಷ ಅಬೂಬಕರ್ ಉಜಿರೆ ವಹಿಸಿದ್ದರು.
ಯು.ಇ.ಎ ಅಧ್ಯಕ್ಷ ಸಿರಾಜ್ ಯರ್ಮಲ್ ಹಾಗೂ ಮಹಾಸಚಿವ ಇಮ್ಮಿಯಾಜ್ ಹಜಾಜ್ ಅವರು ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್‌ನ ದೃಷ್ಟಿಕೋನ ಮತ್ತು ಯೋಜನೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ರಚನೆ ನಡೆಯಿತು.
ಗೌರವಾಧ್ಯಕ್ಷರಾಗಿ ಎಸ್.ಎ ಖಾದರ್, ಅಧ್ಯಕ್ಷರಾಗಿ ಫಝಲ್ ಉರ್ ರಹ್ಮಾನ್, ಉಪಾಧ್ಯಕ್ಷರುಗಳಾಗಿ ರಹ್ಮಾನ್ ಉಜಿರೆ, ಅಶ್ರಫ್ ಉಜಿರೆ, ಯಹ್ಯಾ ಉಜಿರೆ, ಮುಖ್ಯ ಕಾರ್ಯದರ್ಶಿಯಾಗಿ ಹಮ್ಹಾ ಉಜಿರೆ, ಖಜಾಂಚಿಯಾಗಿ ಹಾರೀಸ್ (ಅಚ್ಚಿ), ಸಹ ಕಾರ್ಯದರ್ಶಿಗಳಾಗಿ ಅಶ್ವಿರ್, ಶಲೀಲ್, ಸಾದಿಕ್, ಸಲೀಮ್, ಕ್ರೀಡಾ ಕಾರ್ಯದರ್ಶಿಗಳಾಗಿ ರಿಹಾನ್, ಶೆರಿಫ್ ನೆರಿಯಾ, ನಿಜಾರ್, ಹಕೀಮ್, ಯು.ಸಿ.ಎಲ್ ಆಯ್ಕೆ ಸಮಿತಿಯಲ್ಲಿ ಅಬೂಬಕರ್ ಉಜಿರೆ, ಉಮರ್ ಅಬ್ಬಾ ಇಂಡಿಯನ್, ರೌಫ್, ಮಾಧ್ಯಮದ ವಿಭಾಗ ಇಂಚಾರ್ಜ್,ಅಶ್ರಫ್ ಅಲಿ ಕುಂಚಿ, ರಾಜ್ಯ ಇಂಚಾರ್ಜ್ – ಬೆಳ್ತಂಗಡಿ ವಲಯ ಅಬೂಬಕರ್ ಉಜಿರೆ ಆಯ್ಕೆಯಾದರು.











