25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ

ಬೆಳ್ತಂಗಡಿ : ಅಗಸ್ಟ್ 10 ರಿಂದ 12ನೇ ತಾರೀಖಿನವರೆಗೆ ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುವ ಶ್ರೀ ಗುರುರಾಯರ 354ನೇ ಆರಾಧನ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಶ್ರೀಮಠದಲ್ಲಿ ನಡೆಯಿತು.

ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಿ ಸರ್ವರ ಸಹಕಾರವನ್ನು ಕೋರಿ ಆ.11ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಡಾ ಬಿ ಎ ಕುಮಾರ ಹೆಗ್ಡೆ ಅವರು ಕಾರ್ಯಕ್ರಮದ ವಿವರಣೆಯನ್ನು ನೀಡಿ ಯಶಸ್ವಿಯಾಗಿ ನಡೆಯುವಂತೆ ಸಲಹೆಗಳನ್ನು ನೀಡಿದರು. ಉಪಾಧ್ಯಕ್ಷ ವಿ ಆರ್ ನಾಯಕ್, ಸೋಮೇಗೌಡ, ಮಂಜುನಾಥ ರೈ, ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ಸುಶೀಲಾ ಎಸ್ ಹೆಗ್ಡೆ, ಕೃಷ್ಣ ಶೆಟ್ಟಿ, ಬಂಗಾರು, ರಾಜೇಶ್ ಶೆಟ್ಟಿ ಲಾಯಿಲ, ಶ್ರೀಮತಿ ಸೌಮ್ಯ ಲಾಯಿಲ, ವಿಜಯಕುಮಾರ್ ಶ್ರೀಮತಿ ಕುಸುಮಾವತಿ ಉಪಸ್ಥಿತರಿದ್ದರು. ವಸಂತ ಸುವರ್ಣ ಸ್ವಾಗತಿಸಿ, ಪ್ರೊ. ಎ ಕೃಷ್ಣಪ್ಪ ಪೂಜಾರಿ ವಂದಿಸಿದರು.

Related posts

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ “ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ” ಕಾರ್ಯಾಗಾರ

Suddi Udaya

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ ತತಕ್ಷಣವೇ ಎನ್‌ಐಎಗೆ ಹಸ್ತಾಂತರಿಸಲು ಸಚಿವ ಅಮಿತ್‌ ಶಾಗೆ ಸಂಸದ ಕ್ಯಾ. ಚೌಟ ಪತ್ರ: ತುರ್ತು ಹಾಗೂ ಕಠಿಣ ಕಾನೂನು ಕ್ರಮಕ್ಕೆ ಗೃಹ ಸಚಿವರಲ್ಲಿ ಮನವಿ

Suddi Udaya

ಬೆಳ್ತಂಗಡಿ ಜೆಸಿಐ ವತಿಯಿಂದ ಎಕ್ಸೆಲ್ ಕಾಲೇಜಿನ ಚೇರ್ಮನ್ ಸುಮಂತ್ ಕುಮಾರ್ ಜೈನ್ ರಿಗೆ ಅಭಿನಂದನೆ

Suddi Udaya

ಅಳದಂಗಡಿ: ಬಡಗಕಾರಂದೂರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಹೊಸಂಗಡಿ: ಇಂದಿರಾ ‘ಗಾಂಧಿ ವಸತಿ ಶಾಲೆಯಲ್ಲಿ ಔಷಧೀಯ ವನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Suddi Udaya
error: Content is protected !!