ಉಜಿರೆ: ಮಂಗಳೂರು ಬೆಂದೂರಿನ ಸೈಂಟ್ ತೆರೆಸಾ ಶಾಲೆಯಲ್ಲಿ ಆ.1ರಂದು ನಡೆದ ಅಂತರ ಶಾಲಾ ಜಿಲ್ಲಾ ಮಟ್ಟದ ಐಕ್ಸ್ (AICS) ಸಾಂಸ್ಕೃತಿಕ ನೃತ್ಯ ಸ್ಪರ್ಧೆಯಲ್ಲಿ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ಅತ್ಯದ್ಭುತ ನೃತ್ಯ ಪ್ರದರ್ಶನಕ್ಕೆ ಉದಯೋನ್ಮುಖ ಪ್ರಶಸ್ತಿ ಪಡೆದರು.
ವಿಜೇತರಾದ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು.











