September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಹಿಂದೂ ರುದ್ರ ಭೂಮಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಯಶವಂತ ಗೌಡ ಪೂರ್ಯಾಳ ಆಯ್ಕೆ


ಕೊಯ್ಯೂರು: ಇಲ್ಲಿಯ ಆದೂರು ಪೇರಾಲ್ ಪರಿಸರದಲ್ಲಿ ಸುಮಾರು ಒಂದುವರೆ ಎಕ್ರೆ ಜಾಗವನ್ನು ಹಲವು ವರ್ಷಗಳ ಹಿಂದೆ ಹಿಂದೂ ರುದ್ರ ಭೂಮಿಗಾಗಿ ಮೀಸಲಿಡಲಾಗಿತ್ತು. ಆದೂರು ಪೇರಾಲ್ ಪರಿಸರದಲ್ಲಿ ಹಲವಾರು ಹಿಂದೂ ಕುಟುಂಬಗಳು ವಾಸವಾಗಿದ್ದು ಇಲ್ಲಿ ಯಾರಾದರೂ ಅಕಸ್ಮಾತ್ ಮೃತರಾದರೆ ಅವರ ಅಂತ್ಯ ಸಂಸ್ಕಾರಕ್ಕೆ ದೂರದ ಬೆಳ್ತಂಗಡಿಗೆ ಅಥವಾ ಬೇರೆ ಕಡೆಗೆ ಕೊಂಡು ಹೋಗುವುದನ್ನು ಮನಗಂಡಂತಹ ಗ್ರಾಮ ಪಂಚಾಯತ್ ಹಾಗೂ ಊರವರು ಇದನ್ನು ಅಭಿವೃದ್ಧಿಪಡಿಸಿ ಇಲ್ಲಿ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಇಲ್ಲಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಸದಸ್ಯರುಗಳ ಹಾಗೂ ಊರವರ ಸಭೆಯನ್ನು ನಡೆಸಿ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ನೂತನವಾಗಿ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಶ್ರೀಮತಿ ದಯಾಮಣಿ ರವೀಂದ್ರನಾಥ್ ಪೇರ್ಮುದೆ, ಅಧ್ಯಕ್ಷರಾಗಿ ಯಶವಂತ ಗೌಡ ಪೂರ್ಯಾಳ, ಪ್ರಧಾನ ಕಾರ್ಯದರ್ಶಿಯಾಗಿ ಪಿ ಚಂದ್ರಶೇಖರ ಸಾಲ್ಯಾನ್ ಹರ್ಮಾಡಿ, ಕೋಶಾಧಿಕಾರಿಯಾಗಿ ಶ್ರೀಮತಿ ಹೇಮಾವತಿ ಕಡಮ್ಮಾಜೆ, ಉಪಾಧ್ಯಕ್ಷರುಗಳಾಗಿ ವೆಂಕಣ ಆದೂರು ಪೇರಾಲ್ ಮತ್ತು ಲೋಕೇಶ್ ಗೌಡ ಪಾಂಬೆಲು, ಕಾರ್ಯದರ್ಶಿಗಳಾಗಿ ಚಂದ್ರಶೇಖರ ಗೌಡ ಉಗ್ರೋಡಿ ಮತ್ತು ಹರೀಶ್ ಗೌಡ ಬಜಿಲ ಹಾಗೂ ಸಮಿತಿ ಸದಸ್ಯರುಗಳಾಗಿ 12 ಜನರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಮಣಿ ರವೀಂದ್ರನಾಥ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಗುಣಕರ ರೈ, ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಊರವರು ಹಾಜರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರವರು ಸ್ವಾಗತಿಸಿ , ವಂದಿಸಿದರು.

Related posts

ಸೆ.23: ಬೆಳ್ತಂಗಡಿ ಸುನ್ನೀ ಕೋ-ಆರ್ಡಿನೇಶನ್ ಸಮಿತಿ ವತಿಯಿಂದ “ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌” ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾ.ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಅಧ್ಯಕ್ಷರಾಗಿ ಹರೀಶ್ ಕಾರಿಂಜ, ಕಾರ್ಯದರ್ಶಿಯಾಗಿ ಯತೀಶ್ ಸಿರಿಮಜಲು ಪುನರಾಯ್ಕೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಇಬ್ಬರಿಗೆ ಗೇಟ್ ಪಾಸ್: ನೂತನ ನಗರ ಸಮಿತಿಯ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಗ್ರಾಮೀಣ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಕುಮಾರ್ ಗೌಡ ನೇಮಕ

Suddi Udaya

ನೆರಿಯ: ಕೋಲೋಡಿ ತೋಡಿಗೆ ಪೈಪ್ ಮೋರಿ ಅಳವಡಿಕೆ: ಭರವಸೆ ಈಡೇರಿಸಿದ ರಕ್ಷಿತ್ ಶಿವರಾಂ

Suddi Udaya

ಎಸ್ ಡಿ ಎಂ ಬೆಳ್ತಂಗಡಿ: ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya
error: Content is protected !!