September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳಾಲು ಶ್ರೀ ಧ.ಮಂ.ಅ.ಪ್ರೌಢ ಶಾಲೆಯಲ್ಲಿ ಆಟಿದ ಲೇಸು ಮತ್ತು ಅಭಿನಂದನಾ ಕಾರ್ಯಕ್ರಮ

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಆ.2 ರಂದು ‘ಆಟಿದ ಲೇಸು’ ಮತ್ತು 2024- 25 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ‘ಅಭಿನಂದನಾ ಕಾರ್ಯಕ್ರಮ’ ವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಧರ್ಮಸ್ಥಳದ ಶ್ರೀ ಮಂ. ಸ್ವಾಮಿ ಅ. ಹಿ. ಪ್ರಾ. ಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಸೋಮಶೇಖರ ಶೆಟ್ಟಿ ಉದ್ಘಾಟಿಸಿ, ಇಂತಹ ಕಾರ್ಯಕ್ರಮದಿಂದ ಹಿಂದಿನ ಕೃಷಿ, ಆಹಾರ, ಸಂಸ್ಕೃತಿ ಹಾಗೂ ಜೀವನ ಕ್ರಮದ ಅರಿವು ಮೂಡುತ್ತದೆ ಎಂದರು. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ, ಸಾಧಿಸುವ ಛಲ ಇಟ್ಟುಕೊಂಡು ಕುಟುಂಬ ಮತ್ತು ವಿದ್ಯಾ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಾಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಗೌಡ ಮಾತನಾಡಿ ತುಳುನಾಡಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಒಳ್ಳೆಯ ಕಾರ್ಯಕ್ರಮ ಇದಾಗಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕಿಯಾದ ರಾಜಶ್ರೀ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಶಿಕ್ಷಕ ಜಯರಾಮ ಮಯ್ಯ ಮಾತನಾಡಿ ತುಳುನಾಡಿನ ಸಂಪ್ರದಾಯ ಪರಂಪರೆಯನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರಬೇಕು ಎಂದು ತಿಳಿಸಿದರು. ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಮತ್ತು ಶ್ರಮಿಸಿದ ಅಧ್ಯಾಪಕರನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳು ಅಭಿನಂದನೆಗೆ ಪ್ರತಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಯೋಜಕರಾದ ರವಿಚಂದ್ರ ಜೈನ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿದ್ಯಾರ್ಥಿನಿ ಸೃಜನ್ಯ ಆಟಿ ತಿಂಗಳ ವಿಶೇಷತೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ ಕುರ್ಕಿಲ, ಶಿಕ್ಷಕ ವೃಂದದವರು ಮತ್ತು ಶ್ರೇಯಶ್ರಿ ಉಪಸ್ಥಿತರಿದ್ದರು. ಆಶಾ ಸ್ವಾಗತಿಸಿ, ಹೇಮಲತ ವಂದಿಸಿದರು. ರಕ್ಷಾ.ಕೆ ಮತ್ತು ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್‌ ಮತ್ತು ರೇಂಜರ್ಸ್‌ ದಳದಿಂದ ಚಾರಣ, ಸ್ವಚ್ಚತಾ ಆಂದೋಲನ ಮತ್ತು ಯುವ ದಿನಾಚರಣೆ

Suddi Udaya

ಕರ್ನಾಟಕ ರಾಜ್ಯ ಓಪನ್ ರೀಲೆ ಸ್ಪರ್ಧೆಯಲ್ಲಿ ಸರ್ವಜಿತ್ ಪೂಜಾರಿ ಮರೋಡಿಯವರಿಗೆ ಚಿನ್ನದ ಪದಕ

Suddi Udaya

ನಾರಾವಿ : ಅರಸಿಕಟ್ಟೆಯಲ್ಲಿ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸ್ಥಳೀಯರು

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಹಾಗೂ ಸುರಕ್ಷತಾ ಜಾಗೃತಿ ಕಾರ್ಯಾಗಾರ

Suddi Udaya

ಬ್ರೂನೇ ದೇಶಕ್ಕೆ ಭಾರತದ ಪ್ರಧಾನಿ‌ ನರೇಂದ್ರ ಮೋದಿಜೀಯವರ ಆಗಮನ: ಬ್ರೂನೇ ದೇಶದಲ್ಲಿ ನೆಲೆಸಿರುವ ಬಳಂಜ ಶಶಿಧರ ಹೆಗ್ಡೆ ಮತ್ತು ಪ್ರಜ್ಞಾ ದಂಪತಿ ಮಕ್ಕಳಾದ ರಿಯಾನ್ಷ್ ಹೆಗ್ಡೆ ಮತ್ತು ತನಿಷ್ಕ್ ಹೆಗ್ಡೆಯವರ ಜೊತೆ ಒಂದು ಸ್ಮರಣೀಯ ಕ್ಷಣ

Suddi Udaya

ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಕು. ಅದ್ವಿತಿ ರಾವ್ ದ್ವಿತೀಯ ಸ್ಥಾನ

Suddi Udaya
error: Content is protected !!