September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.5 ರಂದು ಮಂಗಳೂರು ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ಬಾಹ್ಯ ಬೆಂಬಲ

ಮಂಗಳೂರು : ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ನಿವೃತ್ತ ನೌಕರರ ಹಲವಾರು ಹಕ್ಕುಗಳು ತೀವ್ರ ಉಲ್ಲಂಘನೆಯ ಸ್ಥಿತಿಗೆ ತಲುಪಿರುವುದರಿಂದ, ಆ. 5ರಂದು ಜಂಟಿ ಕ್ರೀಯಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬಾಹ್ಯ ಬೆಂಬಲ ನೀಡುತ್ತಿದೆ.

ಸಂಘಟನೆಯ ದೃಷ್ಟಿಯಲ್ಲಿ ವೇತನ ಪರಿಷ್ಕರಣೆ, ಹಿಂಬಾಕಿ ಬಾಕಿ ಹಣದ ಪಾವತಿ, ಅನುಚಿತ ಶಿಸ್ತು ಕ್ರಮಗಳ ವಿರೋಧ, ಗುತ್ತಿಗೆ ನೇಮಕಾತಿಗಳ ರದ್ದುಪಡಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಕ್ರಮಗಳೆಲ್ಲ ಅತೀ ತುರ್ತು ಹಾಗೂ ನ್ಯಾಯಸಮ್ಮತ ಬೇಡಿಕೆಗಳಾಗಿವೆ. ಈ ಬೇಡಿಕೆಗಳು ಕೇವಲ ಕಾರ್ಮಿಕರ ಅಭಿವೃದ್ದಿಗೆ ಮಾತ್ರವಲ್ಲದೆ ನಿಗಮಗಳ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟಕ್ಕೂ ಅತ್ಯಂತ ಅಗತ್ಯವಾಗಿವೆ. ಭಾರತೀಯ ಮಜ್ದೂರು ಸಂಘವು ಯಾವಾಗಲೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರೊಂದಿಗೆ ನಿಂತಿದೆ. ಕಾರ್ಮಿಕರ ಹಿತಾಸಕ್ತಿಯೇ ನಮ್ಮ ಹೋರಾಟದ ನೇರ ಉದ್ದೇಶ. ಸರ್ಕಾರವು ತಕ್ಷಣ ಸ್ಪಂದಿಸಿ ಈ ಬೇಡಿಕೆಗಳನ್ನು ಈಡೇರಿಸಬೇಕೆಂಬುದಾಗಿ ನಾವು ಒತ್ತಾಯಿಸುತ್ತೇವೆ. ಆಗಸ್ಟ್ 5ರ ಪ್ರತಿಭಟನೆ ನೌಕರರ ಧ್ವನಿ, ನೌಕರರ ಆತ್ಮವಿಲ್ಲದ ಸ್ಥಿತಿಗೆ ವಿರೋಧದ ಘೋಷಣೆಯಾಗಲಿದೆ. ಎಲ್ಲ ರಾಜ್ಯ ಸರ್ಕಾರಿ ಸಾರಿಗೆ ನೌಕರರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟದ ಜೊತೆಗೆ ನಮ್ಮ ಧ್ವನಿ ಕೂಡ ಶಕ್ತಿಯಾಗಿ ನಿಲ್ಲಲಿದೆ. ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಹೇಳಿದರು.

Related posts

ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ರಾತ್ರಿ 12 ರವರೆಗೆ ನಿ‍ಷೇಧ: ದ.ಕ. ಜಿಲ್ಲಾಧಿಕಾರಿ ಆದೇಶ

Suddi Udaya

ರೇಖ್ಯ: ಪೊರ್ಕಳ ಅರಣ್ಯ ಪ್ರದೇಶದಲ್ಲಿ ಬಾರಿ ಬೆಂಕಿ

Suddi Udaya

ಬಾರ್ಯ ಶ್ರೀ ವರಮಹಾಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ ವತಿಯಿಂದ ಮೊಸರು ಕುಡಿಕೆ ಉತ್ಸವ, ಗಮನ ಸೆಳೆದ ರಂಗಿನ ಹೋಳಿ, ಬಣ್ಣದ ಓಕುಳಿ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲಂತಬೆಟ್ಟು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಕೊಕ್ಕಡ: ಕೆಎಸ್ಆರ್‌ಟಿಸಿ ಬಸ್–ಕಾರು ಮುಖಾಮುಖಿ ಡಿಕ್ಕಿ: ಮಹಿಳೆಗೆ ಗಾಯ

Suddi Udaya
error: Content is protected !!