September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮನೆಯೊಳಗೆ ಅಕ್ರಮ ಗಾಂಜಾ ದಾಸ್ತಾನು: ಪುಂಜಾಲಕಟ್ಟೆ ಪೊಲೀಸರಿಂದ ದಾಳಿ

ಬೆಳ್ತಂಗಡಿ : ಅಕ್ರಮವಾಗಿ ಕಟ್ಟಡದೊಳಗಡೆ ದಾಸ್ತಾನು ಇರಿಸಿದ್ದ ಗಾಂಜಾವನ್ನು ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿದ್ದು, ಶೇಖರಿಸಿಟ್ಟ ಗಾಂಜಾವನ್ನು ಪತ್ತೆಹಚ್ಚಿ ದಾಳಿ ವೇಳೆ ಆರೋಪಿ ಪರಾರಿಯಾದ ಘಟನೆ ಆ. 3ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ಎಂಬಲ್ಲಿ ರಫೀಕ್ ಎಂಬಾತನ ಮನೆಯೊಳಗೆ 160 ಗ್ರಾಂ ಗಾಂಜಾ ಶೇಖರಿಸಿಟ್ಟ ಬಗ್ಗೆ ಪುಂಜಾಲಕಟ್ಟೆ ಪಿಎಸ್ಐ ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ8C,20B NDPS Act ಅಡಿಯಲ್ಲಿ ಆರೋಪಿ ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ರಫೀಕ್ ವಿರುದ್ಧ ಈ ಹಿಂದೆ ಹಲವು ಗಾಂಜಾ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಆಗಸ್ಟ್ 03 ರಂದು 06:45 ಗಂಟೆಗೆ ಪುಂಜಾಲಕಟ್ಟೆ ಪಿಎಸ್ಐ ರಾಜೇಶ್.ಕೆ.ವಿ ಸಿಬ್ಬಂದಿಗಳೊಂದಿಗೆ ಪಣಕಜೆ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ಎಂಬಲ್ಲಿ ನಿರ್ಮಾಣ ಹಂತದ ಛಾವಣಿ ಇಲ್ಲದ ಕಟ್ಟಡದೊಳಗಡೆ ರಫೀಕ್ ಎಂಬಾತನು ಅಕ್ರಮವಾಗಿ ಸುಮಾರು ರೂ.15,000 ಮೌಲ್ಯದ ಒಟ್ಟು 160 ಗ್ರಾಂ ತೂಕದ ಗಾಂಜಾದ ಎಲೆ ಮೊಗ್ಗು, ಬೀಜವನ್ನು ತಂದಿಟ್ಟಿದ್ದನ್ನು ತಹಶೀಲ್ದಾರರು ಬೆಳ್ತಂಗಡಿ ಹಾಗೂ ಪಂಚರ ಸಮಕ್ಷಮ ವಿವರವಾದ ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಠಾಣಾ ಸರಹದ್ದಿನ ಆಧಾರದಲ್ಲಿ ಮಹಜರು ಹಾಗೂ ವರದಿಯನ್ನು ಮುಂದಿನ ಕ್ರಮದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Related posts

ಬಂದಾರು :ಪೆರ್ಲ -ಬೈಪಾಡಿ ನಿವಾಸಿ ನಾರಾಯಣ ಪೂಜಾರಿ ನಿಧನ

Suddi Udaya

ಅಕ್ರಮ ಸಕ್ರಮ ಭೂ ಮಂಜೂರಾತಿ ಆ್ಯಪ್ ನಲ್ಲಿ ಇರುವ ತೊಡಕನ್ನು ಬದಲಾಯಿಸುವಂತೆ ಆಗ್ರಹಿಸಿ ಕೃಷಿಕರಿಂದ ಸಚಿವ ಕೃಷ್ಣ ಬೈರೆ ಗೌಡರಿಗೆ ಪತ್ರ ಚಳುವಳಿ ಮೂಲಕ ಮನವಿ

Suddi Udaya

ಕುವೆಟ್ಟು : ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರ್ ದಿನಾಚರಣೆ

Suddi Udaya

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿ ಬಿದ್ದ ಮರಗಳ ತೆರವು ಕಾರ್ಯ

Suddi Udaya

ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ

Suddi Udaya
error: Content is protected !!