September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಅಗರಿಯಲ್ಲಿ ಕೆಸರೊಡೊಂಜಿ ದಿನ ಬಂಟೆರ್ ಕಾರ್ಯಕ್ರಮ

ಮುಂಡಾಜೆ : ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ,ಉಜಿರೆ ವಲಯ ವ್ಯಾಪ್ತಿಯ ಮುಂಡಾಜೆ ಗ್ರಾಮ ಸಮಿತಿಯ ವತಿಯಿಂದ ಆ.3 ರಂದು ಮುಂಡಾಜೆ ಗ್ರಾಮದ ಅಗರಿ ಬೈಲಿನಲ್ಲಿ ಕೆಸರ್ಡೊಂಜಿ ದಿನ ಬಂಟೆರ್ ಕಾರ್ಯಕ್ರಮವು ಜರಗಿತು.

ಬೆಳ್ತಂಗಡಿ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿ ಗುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ವಿಜಯ ಕೋ ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷ ಅಜಿತ್ ಶೆಟ್ಟಿ ಕೋರ್ಯರ್ , ಮಹಿಳಾ ಬಂಟರ ಸಂಘದ ಅಧ್ಯಕ್ಷ ಜಯಲಕ್ಷ್ಮಿ ಸಾಮಾನಿ, ಉಜಿರೆ ವಲಯ ಬಂಟರ ಸಂಘದ ಅಧ್ಯಕ್ಷರಾದ ವನಿತಾ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯಸ್ಥರುಗಳಾದ , ಸೀತಾರಾಮ ಶೆಟ್ಟಿ ಕೆಂಬಾರ್ಜೆ, ಜಯಂತ ಶೆಟ್ಟಿ ಕುಂಟಿನಿ, ಸುರೇಶ್ ಶೆಟ್ಟಿ ಲಾಯಿಲ, ಸಂಜೀವ ಶೆಟ್ಟಿ ಕುಂಟಿನಿ, ಉಮೇಶ್ ಶೆಟ್ಟಿ ದುರ್ಗಾ ನಿಲಯ, ರವೀಂದ್ರ ಶೆಟ್ಟಿ ಬಳಂಜ, ವಸಂತ ಶೆಟ್ಟಿ ಶ್ರದ್ಧಾ, ಜಯರಾಮ ಶೆಟ್ಟಿ ಕೆಂಬಾರ್ಜೆ, ರಾಧಾಕೃಷ್ಣ ಶೆಟ್ಟಿ ಕುಂಟಿನಿ, ನಿರಂಜನ ಶೆಟ್ಟಿ ಉಜಿರೆ, ರಾಮಣ್ಣ ಶೆಟ್ಟಿ ಅಗರಿ, ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ದಯಾನಂದ ಶೆಟ್ಟಿ ಅಗರಿ, ಹರಿಣಾಕ್ಷಿ ರೈ ಅಗರಿ, ಸಂತೋಷ್ ಶೆಟ್ಟಿ ಮುಕ್ಕಡ ಮುಂತಾದವರು ಉಪಸ್ಥಿತರಿದ್ದರು.

ಪಿ ಎಚ್ ಡಿ ಪದವಿ ಪಡೆದ ಅಶ್ವಿನಿ ಎಸ್ ಶೆಟ್ಟಿ ಸೋಮಂತಡ್ಕ ಮತ್ತು ಹಿರಿಯ ವ್ಯಾಪಾರಿ ನೇಮು ಶೆಟ್ಟಿ ಮಂಜುಶ್ರೀ ನಗರ ಇವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ ಇವರು ವಹಿಸಿಕೊಂಡಿದ್ದರು. ಜಯಂತಿ ಶೆಟ್ಟಿ ನೆಯಾಲ್ ಇವರು ಪ್ರಾರ್ಥಿಸಿ, ನವೀತ್ ಶೆಟ್ಟಿ ನೆಯಾಲ್ ಇವರು ಸ್ವಾಗತಿಸಿದರು. ಹರ್ಷಿತ್ ಶೆಟ್ಟಿ ನೆಯ್ಯಾಲ್ ಇವರು ನಿರೂಪಿಸಿ ಮಧು ಶೆಟ್ಟಿ ಹುರ್ತಜೆ ಇವರು ವಂದಿಸಿದರು.

ಕಾರ್ಯಕ್ರಮದ ಜವಾಬ್ದಾರಿಯನ್ನು ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ನಾಗಂಡ ಇವರು ವಹಿಸಿಕೊಂಡು ಕ್ರೀಡಾ ಕಾರ್ಯದರ್ಶಿ ದಿನರಾಜ ಶೆಟ್ಟಿ, ಸಂತೋಷ್ ಶೆಟ್ಟಿ ಮಾಡ ಮತ್ತು ಭರತರಾಜ್ ರೈ ಅಗರಿ ಇವರು ಸಹಕರಿಸಿದರು. ಉಜಿರೆ , ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ, ತೋಟತಾಡಿ ನೆರಿಯ ಗ್ರಾಮದ ಸುಮಾರು 300 ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಎಲ್ಲಾ ಗ್ರಾಮಗಳ ಪದಾಧಿಕಾರಿಗಳು ಮತ್ತು ಬಂಟ ಬಂಧುಗಳು ತನು ಮನ ಧನಗಳ ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಫ್ : 75 ಕೆ.ಜಿ ವಿಭಾಗದಲ್ಲಿ ಹೇಮಚಂದ್ರರಿಗೆ ಕಂಚಿನ‌ ಪದಕ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ 6ನೇ ಗುರುತು ಮಾಡಿದ್ದ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣ: ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕೊಯ್ಯೂರಿನ ಮಾವಿನಕಟ್ಟೆ ಪರಂಗಡಿ ನಾಗಬನದಲ್ಲಿ ನಾಗತಂಬಿಲ ಸೇವೆ

Suddi Udaya

ಉಜಿರೆ:ಎಸ್.ಡಿ.ಎಂ ಮಹಿಳಾ ಐ.ಟಿ.ಐ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ

Suddi Udaya

ಧರ್ಮಸ್ಥಳ ಡಾ. ವಿಘ್ನರಾಜ್ ಎಸ್.ಆರ್. ರವರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಬಿಜೆಪಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!