September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ : ಎಸ್.ಐ.ಟಿಗೆ ಹಸ್ತಾಂತರಿಸುವಂತೆ ಆದೇಶ

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 1.08.2025 ರಂದು ವರದಿಯಾಗಿದ್ದ ಯು.ಡಿ.ಆರ್ ಸಂಖ್ಯೆ: 35/2025, ಕಲಂ: 174 (3) & (VI) ಸಿ.ಆರ್.ಪಿ.ಸಿ ಪ್ರಕರಣ ಹಾಗೂ ದಿನಾಂಕ:04.08.2025 ರಂದು ವರದಿಯಾಗಿದ್ದ 200/DPS/2025 ದೂರರ್ಜಿಯನ್ನು, , ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಕರ್ನಾಟಕ ರಾಜ್ಯದ ಮಾನ್ಯ ಡಿ.ಜಿ.ಪಿ & ಐ.ಜಿ.ಪಿ ರವರು ಅದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ.4ರಂದು ಧರ್ಮಸ್ಥಳ ಠಾಣೆಯಲ್ಲಿ ಇಚಿಲಂಪಾಡಿ ನಿವಾಸಿ ಜಯಂತ್ ಅವರು ನೀಡಿದ ದೂರು ಪ್ರಕರಣ ಹಾಗೂ ಅನಾಮಿಕ ದೂರುದಾರ ಗುರುತಿಸಿದ 6ನೇ ಸ್ಥಳದಲ್ಲಿ ದೊರೆತ ಶವದ ಅವಶೇಷಗಳ ಬಗ್ಗೆ ಆ.1 ರಂದು ಧಮ೯ಸ್ಥಳ ಠಾಣೆಯಲ್ಲಿ ದಾಖಲಾದ ಯು.ಡಿ.ಆರ್ ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಕರ್ನಾಟಕ ರಾಜ್ಯದ ಡಿ.ಜಿ.ಪಿ ಮತ್ತು ಐ.ಜಿ.ಪಿಯವರು ಆದೇಶದಂತೆ ಎಸ್ ಐಟಿ ತನಿಖೆಗೆ ಹಸ್ತಾಂತರಿಸಬೇಕಾಗಿದೆ.

ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಹೂತು ಹಾಕಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 200/DPS/2025 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

Related posts

ಡಾ. ಡಿ. ವೀರೇಂದ್ರ ಹೆಗ್ಗಡೆ ಪರ ಪ್ರತಿಬಂಧಕಾದೇಶ ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಸೂಚನೆ

Suddi Udaya

ಸೌದಿ ಅರೇಬಿಯಾದಲ್ಲಿ ಬಿಲ್ಲವ ಅಸೋಸಿಯೇಶನ್ ಸಮಿತಿ ರಚನೆ : ಅಧ್ಯಕ್ಷರಾಗಿ ಕಿಶೋರ್ ಪೂಜಾರಿ, ಪ್ರ. ಕಾರ್ಯದರ್ಶಿಯಾಗಿ ಜಯಕರ ಎಂ. ಪೂಜಾರಿ

Suddi Udaya

ಕಡಿರುದ್ಯಾವರ : ಶಿರಿಬೈಲು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ನ್ಯಾಯಾಲಯಕ್ಕೆ ಹಾಜರಾಗದ ವಾರಂಟ್ ಆರೋಪಿ ಬಂಧನ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಸನ್ಮಾನ

Suddi Udaya
error: Content is protected !!