ಉಜಿರೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2024-25 ನೇ ಸಾಲಿನ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಅನುಗ್ರಹ ಶಾಲೆಯ ಬಾಲಕ ಬಾಲಕಿಯರು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿಅಫನ್‌ಶರಿಫ್, ವಿಶ್ವಾಸ್ ಶೆಟ್ಟಿ,ನಿಶಿತ್, ಅದ್ವಿತ್ ಸುರ‍್ಣ, ಫೆಬಿನ್ ಫ್ರಾನ್ಸಿಸ್, ಬಾಲಕಿಯರ ವಿಭಾಗದಲ್ಲಿಅವಿಷ್ಕಾ, ಆದ್ಯ, ಪ್ರಾಪ್ತಿಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರಾದ ನಿಶ್ಚಿತ್ ಇವರು ತರಬೇತಿ ನೀಡಿದ್ದು ವಿಜೇತ ಕ್ರೀಡಾಳುಗಳನ್ನು ಶಾಲಾ ಸಂಚಾಲಕರು ,ಪ್ರಾಂಶುಪಾಲರು, ಶಿಕ್ಷಕರು ಅಭಿನಂದಿಸಿದ್ದಾರೆ.











