25.7 C
ಪುತ್ತೂರು, ಬೆಳ್ತಂಗಡಿ
March 7, 2026
ಆರೋಗ್ಯ

ವೇಣೂರು :ಬ್ರಹತ್ ಉಚಿತ ವೈದ್ಯಕೀಯ ಹೃದಯ ರೋಗ ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ

ವೇಣೂರು :ಬ್ರಹತ್ ಉಚಿತ ವೈದ್ಯಕೀಯ ಹೃದಯ ರೋಗ ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಶಾಸಕರಾದ ಹರೀಶ್ ಪೂಂಜಾ ರವರು ಕಾರ್ಯಕ್ರಮ ವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿಯ ಪ್ರಮುಖ ಕಾರಣವಾಗಿದೆ ಬದಲಾದ ಜೀವನ ಶೈಲಿ ಆಹಾರದ ಪದ್ಧತಿ ಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ ಇಂದಿನ ದಾವಂತದ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಮಯವಿಲ್ಲದಂತಾಗಿದೆ ನಾವು ಮಕ್ಕಳಿಗೆ ಶಿಕ್ಷಣ ನೀಡುವಾಗ ಬಹಳ ಯೋಚನೆ ಮಾಡುತ್ತೆವೆ ನಮ್ಮ ಅರೋಗ್ಯ ಕಡೆ ನಾವು ಯೋಚನೆ ಮಾಡುವುದ್ದಿಲ್ಲ ನಾವು ಪ್ರತಿ ನಿತ್ಯ ಸೇವಿಸುವ ಆಹಾರ ಬಗ್ಗೆ ನಮಗೆ ಸ್ವಲ್ಪವು ಕಾಳಜಿ ಇಲ್ಲ ನಮ್ಮ ಮನೆಗೆ ಬೇಕಾಗುವ ತರಕಾರಿಯನ್ನು ನಾವೇ ಬೆಳೆದು ಸೇವಿಸಿ ನಮ್ಮ ಅರೋಗ್ಯ ನಾವೇ ಕಾಪಾಡಿಕೊಳಬೇಕೆಂದು ಮಾಹಿತಿ ನೀಡಿದರು

ಕೆ. ಎಂ. ಸಿ ಆಸ್ಪತ್ರೆ ಆತಾವರ ಮಂಗಳೂರನ ನುರಿತ ವೈದ್ಯರ ಮಾರ್ಗದರ್ಶನ ದಲ್ಲಿ ಕ್ಯಾನ್ಸರ್ ತಪಾಸಣೆ ಯನ್ನು ಪುರುಷ ರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾಗಿ ತಪಾಸಣೆ ನಡೆಸಲಾಯಿತು ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು ಬಹಳ ಜನರು ರಕ್ತ ದಾನ ಭಾಗವಹಿಸಿದರು, ಸಾಮಾನ್ಯ ರೋಗ ವಿಭಾಗ ಎಲಬು ಮತ್ತು ಕಿಲುರೋಗ ವಿಭಾಗ ಕಿವಿ ಮೂಗು ಮತ್ತು ಗಂಟಲು ವಿಭಾಗ ಕ್ಯಾನ್ಸರ್ ವಿಭಾಗ, ಕಣ್ಣಿನ ವಿಭಾಗ ಹೃದಯ ವಿಭಾಗ ವಾಗಿ ವಿಂಗಡಣೆ ಮಾಡಿ ಎಲ್ಲಾ ಜನರಿಗೆ ತಪಾಸಣೆ ಮಾಡಲಾಯಿತು

ಕಾರ್ಯಕ್ರಮ ದಲ್ಲಿ :ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಜಗದೀಶ್ ನಾಯಕ್ ಸಿಎ ಬ್ಯಾಂಕಿನ ಅಧ್ಯಕ್ಷರು ಸುಂದರ ಹೆಗ್ಡೆ skdrdp ಬಿ. ಸಿ ಟ್ರಸ್ಟ್ ಯೋಜನಾಧಿಕಾರಿಗಳು ಅಶೋಕ್, ಹಾಲು ಉತ್ಪಾದಕರ ಸಹಕರಿ ಸಂಘದ ಅಧ್ಯಕ್ಷರು ಸೀತಾರಾಮ್ ರೈ ಮತ್ತು ಜಗದೀಶ್ ನಾಯಕ್ ಪೂರ್ಣಚಂದ್ರ ಸೇವಾ ಪ್ರತಿಷ್ಠಾಪನ ಅಧ್ಯಕ್ಷರು ಮರಳಿದರ್ ಪ್ರಭು ಬಂಟರ, ಗ್ರಾಮ ಸಮಿತಿ ಅಧ್ಯಕ್ಷರು ರವಿಚಂದ್ರ ಶೆಟ್ಟಿ ಮತ್ತು ಮಂಜುನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ದಿನೇಶ್ ಶೆಟ್ಟಿ ಕ್ರಿಸ್ತ ದೇವಾಲಯ ಭಾರತೀಯ ಕ್ಯಾಥೋಲಿಕ್ ಯುವಕ ಸಂಚಾಲನ ವೇನೂರು ಘಟಕದ ಅಧ್ಯಕ್ಷರು ಅರುಣ ಮತ್ತು ಜಸ್ವಿನ್ ಲೋಬೊ ವಲಯದ ಮೇಲ್ವಿಚಾರಕರು ಶ್ರೀ ಮತಿ ಶಾಲಿನಿ ಒಕ್ಕೂಟದ ಅಧ್ಯಕ್ಷರುಗಳಾದ ವಿನ್ಸೆಂಟ್ ವಿಲಿಯಂ ರೇಗು ಮತ್ತು ಪ್ರವೀಣ್ ನಾಯಕ್ ರಮೇಶ್ ನಾಯಕ್ ಸ್ವಾಗತಿ ಸಿದರು ಸೇವಾ ಪ್ರತಿನಿಧಿಯಾದ ಶೋಭಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು

Related posts

ಕುಂಟಿನಿ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿ ರಿಜಿಸ್ಟ್ರಾರ್ ಭೇಟಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಹಿಸ್ಟರೆಕ್ಟಮಿ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ನಿಡ್ಲೆ: ನರೇಗಾ ಯೋಜನೆಯ ಕೂಲಿಕಾರರಿಗೆ ಆರೋಗ್ಯ ತಪಾಸಣೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya
error: Content is protected !!