25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸುಳ್ಳು ಸುದ್ದಿ ಪ್ರಸಾರ ಹಾಗೂ ಅವ್ಯಾಚ್ಯ ನಿಂದನೆ ದೂರು : ಸುವರ್ಣ ನ್ಯೂಸ್ ಆ್ಯಂಕರ್ ಹಾಗೂ ವರದಿಗಾರ, ಕ್ಯಾಮೆರಾಮ್ಯಾನ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಸುವರ್ಣ ವಾಹಿನಿಯ ನ್ಯೂಸ್ ಆ್ಯಂಕರ್ ಅಜಿತ್ ಹನುಮಕ್ಕನವರ್, ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ ಎಂದು ಸುಳ್ಳು ಸುದ್ದಿಪ್ರಸಾರ ಮಾಡಿದ್ದಾರೆ ಹಾಗೂ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಅವಾಚ್ಯವಾಗಿ ನಿಂದಿಸಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಣೇಶ್ ಶೆಟ್ಟಿ ಹಾಗೂ ಗಿರೀಶ್ ಮಟ್ಟಣ್ಣನವರ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.6ರಂದು ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಆ.6 ರಂದು ಧರ್ಮಸ್ಥಳದ ಸಮೀಪ ಪಾಂಗಳದಲ್ಲಿ ಹಲ್ಲೆಗೊಳಗಾದ ಉಜಿರೆಯ ಕುಂಟಿನಿ ನಿವಾಸಿ ಗಣೇಶ್ ಶೆಟ್ಟಿರವರ ಭಾವ ಪ್ರಮೋದ್, ಸಂಚಾರಿ ಸ್ಟುಡಿಯೋ ವರದಿಗಾರ ಸಂತೋಷ್ ಕುಮಾರ್, ಕುಡ್ಲ ರಾಮ್ ಪೇಜ್ ವರದಿಗಾರ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ವರದಿಗಾರ ಅಭಿಷೇಕ್ ಹಾಗೂ ಕ್ಯಾಮರಾಮೆನ್ ಆಜಯ್ ರವರನ್ನು ಗಣೇಶ್ ಶೆಟ್ಟಿ ಚಿಕಿತ್ಸೆಯ ಬಗ್ಗೆ, ಉಜಿರೆ ಬೆನಕ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದು, ಈ ಸಮಯ ಆಸ್ಪತ್ರೆಗೆ ಬಂದ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ರವರನ್ನು ಸುವರ್ಣ ನ್ಯೂಸ್ ನ ವರದಿಗಾರ ಹಾಗೂ ಕ್ಯಾಮರಾಮೆನ್, ಬೈಟ್ ಕೊಡಿ ಎಂದಾಗ ಗಿರೀಶ್ ಮಟ್ಟಣ್ಣನವರು ಇದು ಆಸ್ಪತ್ರೆಯ ಆವರಣ , ನಿಮ್ಮ ಸುವರ್ಣ ಚಾನಲ್ ನ ಅಜಿತ್ ಜೈನ್ ಸುಳ್ಳು ಪ್ರಸಾರ ಮಾಡಿ ಧರ್ಮಸ್ಥಳದ ರಕ್ಷಣೆ ಮಾಡುತ್ತಿದ್ದಾರೆ ಜನರ ಆಕ್ರೋಶಗೊಳ್ಳುತ್ತಾರೆ, ಇಲ್ಲಿ, ಯಾವುದೇ ಬೈಟ್ ಬೇಡ ಎಂದು ವಿನಂತಿಸಿಕೊಂಡಿದ್ದು.
ಅದನ್ನು ಲೆಕ್ಕಿಸದೇ ವರದಿಗಾರ ಹಾಗೂ ಕ್ಯಾಮರಾಮೆನ್ ಒಳಗೆ ನುಗ್ಗಲು ಯತ್ನಿಸಿದ್ದು, ಆಗ ಅವರ ವರ್ತನೆಯಿಂದ ಅಸಮಾಧಾನಗೊಂಡ ಅಲ್ಲಿದ್ದ ಕೆಲವರು, ಅಜಿತ್ ಜೈನ್ ಅತ್ಯಾಚಾರಿಗಳ ಪರವಾಗಿ ವರದಿ ಮಾಡುವ ಚಾನೆಲ್ ನವರು ಆಸ್ಪತ್ರೆಯ ಒಳಗಡೆ ನುಗ್ಗಿ ಗಾಯಗೊಂಡಿದ್ದ ಮಾದ್ಯಮ ಹಾಗೂ ಗಣೇಶ್ ಶೆಟ್ಟಿ ರವರ ಭಾವನಿಗೆ ತೊಂದರೆ ಕೊಡಬಹುದು ಎಂದು ಪೊಲೀಸರಿಗೆ ಆಗ್ರಹ ಮಾಡಿದ್ದು, ಆಗ ವರದಿಗಾರ ಹಾಗೂ ಕ್ಯಾಮರಾಮನ್ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಪರ ಹೋರಾಟಗಾರರನ್ನು ತಳ್ಳಲು ಪ್ರಯತ್ನಿಸಿದಾಗ ತಳ್ಳಾಟ ಶುರುವಾಗಿದ್ದು, ಆಗ ಮಹೇಶ್ ಶೆಟ್ಟಿ, ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ರವರು ಚಾನೆಲ್ ರವರನ್ನು ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗಿ ಕೂರಿಸಿದ್ದು, ಈ ಸಮಯ ಸುವರ್ಣ ಚಾನೆಲ್ ನ ವರದಿಗಾರರು ಸುಮ್ಮನಿರದೇ ವರದಿ ಮಾಡುತ್ತೇವೆ ಎಂದು ಆವೇಶದಿಂದ ಕರೆ ಮಾಡುತ್ತಿದ್ದು, ಕೆಲವೇ ಸಮಯದಲ್ಲಿ ಸುವರ್ಣ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಎನ್ನುವ ನ್ಯೂಸ್ ಆ್ಯಂಕರ್ , ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಲು ಪ್ರಾರಂಭಿಸಿದ್ದು, ಘಟನೆಯ ಬಗ್ಗೆ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಅಂಕರ್ ಹಾಗೂ ಅವಾಚ್ಯವಾಗಿ ನಿಂದಿಸಿದ ವರದಿಗಾರ ಹಾಗೂ ಕ್ಯಾಮರಾಮನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಲುವಂತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

Related posts

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಅ.17ರಂದು ವಿದ್ಯುತ್ ನಿಲುಗಡೆ

Suddi Udaya

ದೇವನಗುಲ್‌ ಚಾರ್ಮಾಡಿ ಅಡ್ಡ ರಸ್ತೆಗೆ ಗೇಟ್‌ – ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

Suddi Udaya

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya

ಓಡಿಲ್ನಾಳ ನಿವಾಸಿ ಲಕ್ಷ್ಮಿ ನಿಧನ

Suddi Udaya

ಕೊಕ್ಕಡದಲ್ಲಿ ಸತ್ಯ ಸುದ್ದಿ ನ್ಯೂಸ್ ಕಛೇರಿ ಮತ್ತು ವೆಬ್ ಸೈಟ್ ಲೋಕಾರ್ಪಣೆ

Suddi Udaya

ವೇದ ವಿದ್ವಾಂಸರಾದ ವೇದಮೂರ್ತಿ ಶಂಭು ಭಟ್ ಚಾವಡಿಬಾಗಿಲು “ಹವ್ಯಕ ವೇದ ರತ್ನ” ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!