25.7 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಐಸ್ ಬ್ರೇಕ್’ ಕಾರ್ಯಕ್ರಮ

ಉಜಿರೆ :ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಅರಿತು ಮುನ್ನಡೆಯುವುದಕ್ಕೆ ಪೂರಕವಾದ ‘ಐಸ್ ಬ್ರೇಕ್’ ಕಾರ್ಯಕ್ರಮ ಇಂದು (ಆ.7) ನಡೆಯಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕಲಾಕೇಂದ್ರದ ರಂಗ ನಿರ್ದೇಶಕ ಯಶವಂತ್ ಬೆಳ್ತಂಗಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾವೆಲ್ಲರೂ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಯಾವುದೇ ಭೇದ-ಭಾವ ಇಟ್ಟುಕೊಳ್ಳದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಆಗ ಯಶಸ್ಸು ಖಂಡಿತ” ಎಂದರು.

ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನೆಯ ಆಟ ಆಡಿಸುವ ಜೊತೆಗೆ, ಕೈ ಮುಗಿದು ನಮಸ್ಕಾರ ಮಾಡುವ ಉದ್ದೇಶ, ಅರ್ಥ ತಿಳಿಸಿದರಲ್ಲದೆ, ಕಾರ್ಯಕ್ರಮ ಸಂಯೋಜನೆ, ಸ್ವಾಗತ ಹಾಗೂ ಧನ್ಯವಾದ ಸಮರ್ಪಿಸುವ ರೀತಿ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.

ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸ್ವಾಗತಿಸಿದರು. ಪ್ರಮಿತ ಮತ್ತು ಪೌಜಿಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಕೆಪಿಎಸ್ ಪುಂಜಾಲಕಟ್ಟೆ, ಸೃಷ್ಟಿ ಟಿoಕರಿಂಗ್ ಪ್ರಯೋಗಾಲಯ ಉದ್ಘಾಟನೆ

Suddi Udaya

ಕನ್ಯಾಡಿ I: ನೇರೊಳ್‌ಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ

Suddi Udaya

ಮಕ್ಕಳ ಧ್ವನಿ ಕಾರ್ಯಕ್ರಮದ ಕವನ ಮತ್ತು ಕಥಾಗೋಷ್ಠಿಯಲ್ಲಿ ಭಾಗವಹಿಸಿದ ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ವಿದ್ಯಾರ್ಥಿಗಳು

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಚಿಂತನಾ ದಿನಾಚರಣೆ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya
error: Content is protected !!