23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ಜೆಸಿಐ ಕಪಿಲ ಘಟಕ ಹಾಗೂ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ಕಡಬ ಆಶ್ರಯದಲ್ಲಿ “ಆರೋಗ್ಯ ಅರಿವು ಕಾರ್ಯಕ್ರಮ

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲ ಘಟಕ ಮತ್ತು ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ಕಡಬ ಇದರ ಆಶ್ರಯದಲ್ಲಿ “ಆರೋಗ್ಯ ಅರಿವು 2025” ಎಂಬ ಹೆಸರಿನಲ್ಲಿ ರಕ್ತ ವರ್ಗಿಕರಣ ಶಿಬಿರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಂತ ಜಾನರ ಹಿ. ಪ್ರಾ ಶಾಲೆ ಕೊಕ್ಕಡದಲ್ಲಿ ಜರುಗಿತು.

ಉದ್ಘಾಟನೆಯನ್ನು ಕೊಕ್ಕಡದ ವಕೀಲರು ಮತ್ತು ದಸ್ತವೇಜು ಬರಹಗಾರರಾದ ಶ್ರೀಮತಿ ಧನ್ಯ ಕೇವಳ ಹಾಗೂ ಉದ್ಘಾಟಕರ ಭಾಷಣದಲ್ಲಿ ಅವರು ಆರೋಗ್ಯ ಮತ್ತು ರಕ್ತದಾನದ ಮಹತ್ವ ತಿಳಿಸಿದರು.
ಅತಿಥಿಯಾಗಿರುವ ನಾಡೋಳಿ ಡಯಾಗ್ನಸ್ಟಿಕ ಸೆಂಟರ್ನ ಆಡಳಿತ ಮಂಡಳಿಯ ನಿರ್ದೇಶಕರಾದ ಕಾಶೀನಾಥ್ ಅವರು ರಕ್ತದಾನದ ಮಹತ್ವ, ರಕ್ತ ವರ್ಗಿಕರಣದ ಬಗ್ಗೆ ಮತ್ತು ಜೆಸಿಯ ಉದ್ದೇಶವನ್ನು ವಿವರಿಸಿದರು.

ಮುಖ್ಯ ಅತಿಥಿ ಶ್ರೀಮತಿ ಜೇನವಿವ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಆರೋಗ್ಯ ಅರಿವು 2025 ಕಾರ್ಯಕ್ರಮದ ಅಡಿಯಲ್ಲಿ ಹಲವು ಸ್ಪರ್ಧೆಯನ್ನು ಆಯೋಜಿಸಿ, ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಎಲ್ಲಾ ಮಕ್ಕಳ ರಕ್ತ ವರ್ಗಿಕರಣ ಮಾಡಿ ರಕ್ತ ಗುಂಪನ್ನು ಹೇಳಲಾಯಿತು. ಕಾರ್ಯಕ್ರಮದ ಪ್ರಯೋಜಕರಾದ ಜೆಸಿಂತಾ ಡೆಸೋಜ ಉದ್ಘಾಟಕರ ಪರಿಚಯವನ್ನು ವಾಚಿಸಿದರು ಹಾಗೂ ಶಾಲೆಗೆ ನೆನಪಿನ ಕಿಟ್ ನ್ನು ನೀಡಿದರು.


ಜೆಸಿ ಧನುಷ್ ಮತ್ತು ಜೇಸಿಂತಾ ಡೆಸೋಜಾ ಕಾರ್ಯಕ್ರಮದ ಕುರಿತು ಅನಿಸಿಕೆ ಹೇಳಿದರು. ಮಾರ್ಗದರ್ಶಕರಾದ ಜೋಸೆಫ್ ಪಿರೇರಾ, ಪೂರ್ವಧ್ಯಕ್ಷ ಶ್ರೀದರ್ ರಾವ್, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ ಜೈನ್, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ವಿಕ್ಟರ್, ಜೆಸಿ ದೀಪಾ, ಜೆಸಿ ಆಯುಷ್ ಜೈನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ನಾಡೋಳಿ ಡಯಾಗ್ನಸ್ಟಿಕ ಸೆಂಟರ್ ಉದ್ಯೋಗಿಗಳಾದ ತೃಪ್ತಿ ಮತ್ತು ರೂಪರ್ಷಿ ಉಪಸ್ಥಿತರಿದ್ದರು.

ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಕುಟುಂಬದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಉದ್ದೇಶಕ್ಕೆ ಸಾಥ್ ನೀಡಿದರು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷೆ ಶೋಭಾ ಪಿ ಸ್ವಾಗತಿದರು. ಜೆಸಿ ವಾಣಿಯನ್ನು ಜೆಸಿ ಜೋಯೆಲ್ ಪೀರೆರಾ ವಾಚಿಸಿ , ಕಾರ್ಯದರ್ಶಿ ಚಂದನಾ ಜೈನ್ ವಂದಿಸಿದರು.

Related posts

ಸೆ.7: ಕೊಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಎ.12: ಬೆಳ್ತಂಗಡಿ ಟೀಮ್ ನವಭಾರತ್ ಆಶ್ರಯದಲ್ಲಿ ದಿ. ತುಷಾರ್. ಕೆ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಚಾರ್ಮಾಡಿ: ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ  ಕೃಷಿ ನಾಶ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಎಂಟನೇ ದಿನದ ಬ್ರಹ್ಮಕಲಶೋತ್ಸವ:

Suddi Udaya

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ರಾಡಿ: ಭೀಕರ ರಸ್ತೆ ಅಪಘಾತ

Suddi Udaya
error: Content is protected !!