32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಗುರುದೇವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ : ‘ಅರಿವು ಮತ್ತು ಸುಖವನ್ನು ತರಬಲ್ಲ ದೊಡ್ಡ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುವುದರಿಂದ ಸುಂದರ ಜೀವನಾನುಭವದ ವಿಚಾರಗಳನ್ನು ಪಡೆಯಬಹುದು’ ಎಂದು ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಯದುಪತಿ ಗೌಡ ಹೇಳಿದರು.

ಅವರು ಆ.6ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲ್ಲೂಕು ಘಟಕ ಹಾಗೂ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಇದರ ನೇತೃತ್ವದಲ್ಲಿ ನಡೆದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸ ಮಾಲೆ ಪ್ರಯುಕ್ತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕುರಿತು ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ವಸಂತ ಬಿ ಶೆಟ್ಟಿ ಮಾಸ್ತಿಯವರ ಬದುಕನ್ನು ಕುರಿತು ಉಪನ್ಯಾಸ ನೀಡಿ, ‘ಎಷ್ಟೇ ಅಧಿಕಾರವಿದ್ದರೂ ತಮ್ಮ ಬಾಲ್ಯದ ಬಡತನವನ್ನು ಮರೆಯದೆ ಅಧಿಕಾರದ ಮದವನ್ನು ತಲೆಗೆ ಏರಿಸಿಕೊಳ್ಳದೆ ಜನರಿಗಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ಜೀವನವನ್ನು ಮೀಸಲಿಟ್ಟ ಧೀಮಂತ ವ್ಯಕ್ತಿ ಮಾಸ್ತಿಯವರು. ಹಾಗಾಗಿಯೇ ಅವರು ಕನ್ನಡದ ಆಸ್ತಿ ಎಂದು ಕರೆಸಿಕೊಂಡಿದ್ದಾರೆ’ ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಇದ್ದರು.

ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲು ಸ್ವಾಗತಿಸಿ, ರಾಕೇಶ್ ಕುಮಾರ್ ವಂದಿಸಿದರು.

Related posts

ಉಜಿರೆ ಅನುಗ್ರಹ ಪ.ಪೂ ಕಾಲೇಜು ಶೇ. 100 ಫಲಿತಾಂಶ

Suddi Udaya

ತನ್ನ ವಿರುದ್ಧ ಯಾರೂ ಮಾತನಾಡುವವರು ಇಲ್ಲ ಎಂಬ ದುರಾಂಕಾರ ಮಹೇಶ್ ಶೆಟ್ಟಿಯವರಲ್ಲಿದೆ ಅವರದು ಶೇ 20 ಮಾತ್ರ ಹಿಂದುತ್ವ ಶೇ 80 ರೌಡಿಸಂ ಆಗಿದೆ: ಶಶಿರಾಜ್ ಶೆಟ್ಟಿ ಗುರುವಾಯನಕೆರೆ

Suddi Udaya

ಜ.16-20: ಗೇರುಕಟ್ಟೆ ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ಪರಪ್ಪು ಉರೂಸ್ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ ಬಸವನಗುಡಿಯಲ್ಲಿ ಪಿವೈ ಟ್ರೇಡಿಂಗ್ ಟೈಲ್ಸ್,ಗ್ರಾನೈಟ್ ಹಾಗೂ ಸ್ಯಾನಿಟರಿ ಮಳಿಗೆ ಶುಭಾರಂಭ

Suddi Udaya

ಕಣಿಯೂರು: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವರ ಬ್ರಹ್ಮಕಲಶೋತ್ಸವದ ಸಮಿತಿ ಪುನರ್ ರಚನೆ

Suddi Udaya

ಗೇರುಕಟ್ಟೆ : ಪರಪ್ಪು ಈದ್ ಮಿಲಾದ್ ಸ್ವಾಗತ ಸಮಿತಿಯಿಂದ ಕಳಿಯ ಗ್ರಾ.ಪಂ., ರಿಕ್ಷಾ ಚಾಲಕರ ಸಂಘ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನ

Suddi Udaya
error: Content is protected !!