26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಪ್ರಾಧ್ಯಾಪಕ ಈಶ್ವರ ಗೌಡ ಪಿ. ಅವರಿಗೆ ಪಿ. ಎಚ್.ಡಿ ಪದವಿ ಪ್ರದಾನ

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಈಶ್ವರ ಗೌಡ ಪಿ.ರವರಿಗೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ. ಡಾ. ಈಶ್ವರ ಗೌಡ ಪಿ. ಅವರು ಬೆಂಗಳೂರು ವಿ.ವಿ .ಪುರಂನ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಈಶ್ವರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “Growth and Performance of Regional Rural Banks in Karnataka” ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.


ಡಾ. ಈಶ್ವರ ಗೌಡ ಪಿ.ರವರು ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಎಂ.ಬಿ.ಎ ಪದವಿಯನ್ನು ಮೈಸೂರು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಮತ್ತು ತಮ್ಮ ಎಂ.ಎ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಹಾಗೂ ತಮ್ಮ ಎಂ.ಫಿಲ್ ಪದವಿಯನ್ನು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿರುತ್ತಾರೆ.
ಇವರು ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನಲ್ಲಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ವರ್ಗಾವಣೆಗೊಂಡು ಮಡಂತ್ಯಾರಿನ ಪ್ರತಿಷ್ಠಿತ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಈಶ್ವರ ಗೌಡ ಪಿ.ರವರು ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮಿತ್ತಮೂಲೆ ನಾರಾಯಣ ಗೌಡ ಹಾಗೂ ದಿ. ಮಾನಕ್ಕ ದಂಪತಿಯ ಪುತ್ರರಾಗಿದ್ದು,ಪ್ರಸ್ತುತ ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಶೇಡಿಯ ಶ್ರೀನಿಧಿಯಲ್ಲಿ ಪತ್ನಿ ಶಿಕ್ಷಕಿಯಾದ ಶ್ರೀಮತಿ ಭುವನೇಶ್ವರಿ ಪಿ.ಎಂ ಹಾಗೂ ಪುತ್ರರಾದ ನಿಧಿಶ್ ಐ.ಬಿ ಮತ್ತು ಶ್ರೇಯಸ್ ಐ.ಬಿ ಇವರೊಂದಿಗೆ ವಾಸವಾಗಿದ್ದಾರೆ.

Related posts

ಸ್ಪಂದನ ಪಾಲಿಕ್ಲಿನಿಕ್ ವತಿಯಿಂದ ಮನೆ ಬಾಗಿಲಿಗೆ ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸುವ ವ್ಯವಸ್ಥೆ

Suddi Udaya

ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯ ವತಿಯಿಂದ ಸಿನಿಮಾ , ಧಾರವಾಹಿ , ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ಪ್ರಕಾಶ್ ಸವಣಾಲು ರವರಿಗೆ ಕಲಾರತ್ನ ಪ್ರಶಸ್ತಿ

Suddi Udaya

ಲಿಂಗ ಸಮಾನತೆ ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅವಶ್ಯಕ: ಕರ್ತವ್ಯದೊಂದಿಗೆ ಮಹಿಳೆಯರೂ ಸಾಧನೆಯ ಪಥದತ್ತ ಶ್ಲಾಘನೀಯ: ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್.

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ “ಆಟಿದ ನೆಂಪು” ವಿಶೇಷ ಕಾರ್ಯಕ್ರಮ: ಮನಸೆಳೆದ 8 ವರ್ಷದ ಪೋರನ ಆಟಿ ಕಳೆಂಜ ವೇಷ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

Suddi Udaya

ಉಪ ತಹಸಿಲ್ದಾರ್ ಸುನಿಲ್ ಹೃದಯಘಾತದಿಂದ ನಿಧನ

Suddi Udaya
error: Content is protected !!