ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉರುವಾಲು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

ಉರುವಾಲು: 10 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಕಾರ್ಯಕ್ರಮವು ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬಾಕಿಮಾರು ಇಲ್ಲಿ ನಡೆಯಿತು.

ಬೆಳಗ್ಗೆ ವರಮಹಾಲಕ್ಷ್ಮಿ ಕಲಶ ಪ್ರತಿಷ್ಠೆ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬಾಕಿಮಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ವರಮಹಾಲಕ್ಷ್ಮಿ ಪೂಜೆ ಮಾಡುವುದು ನಮ್ಮೆಲ್ಲರಲ್ಲಿ ಒಂದು ಒಗ್ಗಟ್ಟಿನ ಭಾವನೆ ಬರುತ್ತದೆ.ಮನಸ್ಸಿಗೆ ಶಾಂತಿ, ನೆಮ್ಮದಿ, ಆರೋಗ್ಯ ಕೂಡ ‌ಹೆಚ್ಚಾಗುತ್ತದೆ, ಧಾರ್ಮಿಕತೆ ಹಾಗೂ ಸಂಸ್ಕೃತಿ ಬೆಳೆಯುತ್ತಿದೆ. ವರ್ಷಂಪ್ರತಿ ನಡೆಯುವ ಈ ಪೂಜೆಯನ್ನು ನಿಲ್ಲಿಸದೇ ಪ್ರತಿ ವರ್ಷ ಮಾಡುತ್ತಾ ಬರಬೇಕು ಎಂದು ಕಾರ್ಯಕ್ರಮದ ಧಾರ್ಮಿಕ ಭಾಷಣಕಾರರಾಗಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಷ್ಣು ಪ್ರದೀಪ್ ನಿಡ್ಡಾಜೆ ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗಿರಿಜ ಉದ್ಯ, ವಹಿಸಿದ್ದರು.ಇದೇ ಸಂದರ್ಭದಲ್ಲಿ ಉಪನ್ಯಾಸಕ ವಿಷ್ಣು ಪ್ರದೀಪ್ ನಿಡ್ಡಾಜೆ, ಪ್ರಗತಿಪರ ಕೃಷಿಕರಾದ ದಾಸಪ್ಪ ಗೌಡ ಕೋಡಿಯಡ್ಕ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯೆ ಶ್ರೀಮತಿ ಶಶಿಪ್ರಭಾ ಪೆದಮಲೆ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಮಾವತಿ, ವಿಘ್ನೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ನೀನಿ, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಶ್ರೀ ಕೃಷ್ಣ ಸೇವಾ ಸಮಿತಿಯ ಅಧ್ಯಕ್ಷಹೇಮಂತ ಸಿ‌ ಚೆಂಡೆತ್ತಿಮಾರು ಉಪಸ್ಥಿತರಿದ್ದರು.

ಯಶ್ವಿ‌ ಮತ್ತು ಪಲ್ಲವಿ ಪ್ರಾರ್ಥಿಸಿ, ದಿನೇಶ ನಾಯ್ಕ ನೀನಿ ಸ್ವಾಗತಿಸಿ, ಪ್ರದೀಪ್ ನಾಯ್ಕ ಆನಡ್ಕ ನಿರೂಪಿಸಿ , ತೇಜಸ್ವಿನಿ ಕೋಡಿ ಧನ್ಯವಾದವಿತ್ತರು. ವರಮಹಾಲಕ್ಷ್ಮೀ ಪೂಜೆಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಪ್ರತಿಷ್ಠಿತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಮಂಗಳೂರು ಘಟಕದ ಪದಪ್ರದಾನ ಸಮಾರಂಭ: ಎಕ್ಸೆಲ್ ಶಿಕ್ಷಣ ಸಂಸ್ಥೆಗಳ‌ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಸನ್ಮಾನ

Suddi Udaya

ಮುಂದಿನ ತಲೆಮಾರಿನ ಫಾರ್ಮಸಿಸ್ಟ್ ಗಳಿಗೆ ವೃತ್ತಿ ಮಾರ್ಗದರ್ಶನ: ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಪ್ರೇರಣಾದಾಯಕ ಸೆಮಿನಾರ್

Suddi Udaya

ಕಳೆಂಜ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಾ|| ಹೇಮಾವತಿ ವೀ. ಹೆಗ್ಗಡೆಯವರ ಹುಟ್ಟುಹಬ್ಬ: ತಣ್ಣೀರುಪಂತ ವಲಯದ ಮಾಶಾಸನ ಪಡೆಯುವ ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಗರ್ಡಾಡಿ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ನಿಧನ

Suddi Udaya

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!