25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಶ್ರೀ ಪತಂಜಲಿ ಯೋಗ ಶಿಕ್ಷಣ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

ಗುರುವಾಯನಕೆರೆ : ಆ. 09ರಂದು ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಶಾಖೆ ಮತ್ತು ಪಾಂಡುರಂಗ ಶಾಖೆಯ ಯೋಗ ಬಂಧುಗಳು ಸೇರಿ ಪಾಂಡುರಂಗ ನಾಗರಿಕ ಸೇವಾ ಪ್ರತಿಷ್ಠಾನದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿದರು.

ನಮ್ಮ ಮನೆ ಶಾಖೆಯ ಶಿಕ್ಷಕರಾದ ಶಿವಕುಮಾರ್ ರವರು ಅಣ್ಣ – ತಂಗಿಯರ ಬಾಂಧವ್ಯವನ್ನು ಪೌರಾಣಿಕವಾಗಿ ನಡೆದ ಘಟನೆಗಳ ಕಥೆಗಳ ಮೂಲಕ ಸ ವಿಸ್ತಾರ ವಾಗಿ ತಿಳಿಸುವುದರೊಂದಿಗೆ ರಕ್ಷಾಬಂಧನದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲಾ ಅಣ್ಣ ಅಕ್ಕಂದಿರಿಗೆ ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು.


ಪಾಂಡುರಂಗ ಶಾಖೆಯ ಶಿಕ್ಷಕರಾದ ದಯಾನಂದರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಎಲ್ಲಾ ಅಣ್ಣಂದಿರು ಹಾಗೂ ಅಕ್ಕಂದಿರು ಹರ್ಷೋಲ್ಲಾಸದಿಂದ ಪರಸ್ಪರ ರಕ್ಷಾಬಂಧನವನ್ನು ಕಟ್ಟುತ್ತಾ ಸಿಹಿ ತಿಂಡಿಯನ್ನು ಹಂಚುತ್ತಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.


ಎರಡು ಶಾಖೆಯಿಂದ ಸುಮಾರು 75 ಯೋಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ದ.ಕ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ಪದಾಧಿಕಾರಿಗಳ ಸಭೆ

Suddi Udaya

ಕಾಂಗ್ರೇಸ್ ನಾಯಕ ಜಿನ್ನಪ್ಪ ಪೂಜಾರಿ ಕಾಪಿನಡ್ಕ ಬಿಜೆಪಿ ಸೇರ್ಪಡೆ

Suddi Udaya

ಜೂ. 22 ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ವಿದುಷಿ ಕು| ಚೈತ್ರ ಭಟ್ ಭರತನಾಟ್ಯ ರಂಗಪ್ರವೇಶ

Suddi Udaya

ಗುರುವಾಯನಕೆರೆ: ವಿದ್ಯಾರ್ಥಿಯ ಅಗತ್ಯ ದಾಖಲೆ ಪತ್ರವಿದ್ದ ಬ್ಯಾಗ್ ಕಳೆದು ಹೋಗಿದ್ದು ಸಿಕ್ಕಿದವರು ಸಹಕರಿಸುವಂತೆ ಮನವಿ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಬೆಳಾಲು: ಕೊಲ್ಪಾಡಿ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ

Suddi Udaya
error: Content is protected !!