September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.12 ಡಿವಿಡೆಂಡ್ ಘೋಷಣೆ

ಕಲ್ಲೇರಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.9 ರಂದು ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ಅಧ್ಯಕ್ಷತೆಯಲ್ಲಿ ಸಂಘದ ರೈತ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷ ಜಯಾನಂದ ಕಲ್ಲಾಪು ಮಾತನಾಡಿ ಸಂಘ ವಾರ್ಷಿಕವಾಗಿ ರೂ. 276.82 ಕೋಟಿಗಳ ವ್ಯವಹಾರವನ್ನು ಮಾಡಿ ರೂ. 1.16 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಗಿದೆ. ಸಾಲ ವಸೂಲಿ ಶೇ. 100 ಆಗಿವೆ ಎಂದು ತಿಳಿಸಲು ಸಂತೋಷವಾಗುತ್ತದೆ. ಅಲ್ಲದೆ ಕಳೆದ 24 ವರ್ಷಗಳಿಂದ ಸತತವಾಗಿ ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ಗ್ರೇಡ್ ಪಡೆದಿರುವುದು ಅಲ್ಲದೆ ಸತತ 25 ವರ್ಷಗಳಿಂದ ಲಾಭದಲ್ಲಿ ನಡೆಯುತ್ತಿದೆ. ಈ ಸಾಧನೆಗೆ ಸದಸ್ಯರುಗಳ, ನಿರ್ದೇಶಕರುಗಳ ಸಹಕಾರ ಹಾಗೂ ಮಾರ್ಗದರ್ಶನ ಅಲ್ಲದೆ ನಮ್ಮ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಕಾರಣ ಎಂದು ಹೇಳಿದರು.

ಉಪಾಧ್ಯಕ್ಷ ಸುನೀಲ್ ಅಣಾವು, ನಿರ್ದೇಶಕರಾದ ಜಗದೀಶ್ ಶೆಟ್ಟಿ ಮೈರ, ಕೃಷ್ಣಪ್ಪ ಗೌಡ, ರೋಹಿತ್ ಶೆಟ್ಟಿ, ಸಾಮ್ರಾಟ್, ಸರೋಜಿನಿ, ರಜನಿನಾಥ್, ಸುರೇಶ್, ಶ್ರೀನಿವಾಸ್ ಹಾಗೂ ಜಯವಿಕ್ರಮ್ ಕಲ್ಲಾಪು, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ:
ಡಾ.ಯು.ಪಿ.ರತ್ನಾಕರ ರಾವ್, ಅಶೋಕ್ ಕುಮಾರ್ ಮೂಂಡೂರು, ಅಜಿತ್ ಕುಮಾರ್ ಕೆ. ಎನ್., ನಾರಾಯಣ ಗೌಡ ಉರುವಾಲು, ವಿಜಯ, ಇಸುಬು, ಅವ್ವ ಬಿ., ಬೇಬಿ ಪಿ.ವರ್ಗಿಸ್, ವೀರಪ್ಪ ಗೌಡ, ಲಕ್ಷ್ಮಣ್ ನಾಯ್ಕ್ ಹಲೇಜಿ, ನೇತ್ರಾವತಿ, ಬೋಮ್ಮಯ್ಯ ಬಂಗೇರ, ಡಾ.ವೈಷ್ಣವಿ ಕೆ.ವಿ., ಅಚ್ಚುತ ಆಚಾರ್ಯ, ಮೋಹಿನಿ, ಜನಾರ್ದನ ಗೌಡ ನಾಕಾಲು, ಶಂಕರ್ ನಾರಾಯಣ್ ಭಟ್ ಮತ್ತು ಡೀಕಯ್ಯ ಗೌಡ ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಉರುವಾಲು, ತಣ್ಣೀರುಪಂತ, ಕರಾಯ ಗ್ರಾಮಗಳಲ್ಲಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಮಟ್ಟದಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕಿ ಜಯಂತಿ ಪಾಲೇದು ವಂದಿಸಿದರು.

Related posts

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya

ಕಕ್ಕಿಂಜೆ : ಕೃಷಿಕ ಗೋಕುಲ್ ದಾಸ್ ಭಟ್ ನಿಧನ

Suddi Udaya

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಬೆಳಾಲು: ಮಾಯ ಸ.ಉ.ಪ್ರಾ. ಶಾಲೆಯಲ್ಲಿ ರೂ.8.35 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

Suddi Udaya

ಉಜಿರೆ ಎಸ್ ಡಿ ಯಂ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ಚಿಕಿತ್ಸೆ ತರಬೇತಿ

Suddi Udaya

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್: ಅರಸಿನಮಕ್ಕಿಯ ಶುಭಲತಾ ಜಿ. ಪ್ರಥಮ ಸ್ಥಾನ

Suddi Udaya
error: Content is protected !!