September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಾ.13-17: ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಕಾಶಿಪಟ್ಣ : ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.13ರಿಂದ ಪ್ರಾರಂಭಗೊಂಡು 17ರ ತನಕ ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಕೆ ಅನಂತ ಅಸ್ರಣ್ಣನವರು ತಿಳಿಸಿದ್ದಾರೆ.

ಮಾ.13 ಸಂಜೆ 7ರಿಂದ ಭಜನಾ ಕಾರ್ಯಕ್ರಮ (ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕೇಳದಪೇಟೆ ಇವರಿಂದ ) ರಾತ್ರಿ 8 ರಿಂದ ಶ್ರೀ ಪಂಚಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ, ಕೇಳದಪೇಟೆ ಇವರಿಂದ ಯಕ್ಷಗಾನ ಬಯಲಾಟ “ದಕ್ಷಯಜ್ಞ ” ನಡೆಯಲಿದೆ.
ಮಾ.14ರಂದು ಬೆಳಿಗ್ಗೆ 8ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ, ಬೆಳಿಗ್ಗೆ ಗಂಟೆ 7.00ರಿಂದ ಭಜನಾ ಕಾರ್ಯಕ್ರಮ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಬಡಕೋಡಿ ಇವರಿಂದ, ಸಾಯಂಕಾಲ 8ರಿಂದ ವಿಜಯ್ ಕುಮಾರ್ ಜೈನ್ ಸಾರಥ್ಯದಲ್ಲಿ ಹಾಗೂ ತಂಡದವರಿಂದ ಗಾನ-ನೃತ್ಯ ವೈಭವ ನಡೆಯಲಿದೆ.
ಮಾ.15 ರಂದು ಸಂಜೆ 7ರಿಂದ ಭಜನಾ ಕಾರ್ಯಕ್ರಮ ಶ್ರೀ ಮಣಿಕಂಠ ಬಾಲ ಭಜನಾ ಮಂಡಳಿ ಪೆರಾಡಿ ಇವರಿಂದ ಸಂಜೆ ಗಂಟೆ 6ರಿಂದ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇದರಿಂದ ಯಕ್ಷಗಾನ ಬಯಲಾಟ ನೂತನ ಪ್ರಸಂಗ ನಡೆಯಲಿದೆ.
ಮಾ.16 ಸಂಜೆ 7ರಿಂದ ಭಜನಾ ಕಾರ್ಯಕ್ರಮ ಶ್ರೀ ಕೃಷ್ಣ ಭಜನಾ ಮಂಡಳಿ ಸಾವ್ಯ ಇವರಿಂದ, ರಾತ್ರಿ ಗಂಟೆ 8.00ರಿಂದ ಪಿಂಗಾರ ಕಲಾವಿದರ್ ಬೆದ್ರ ಇವರಿಂದ ತುಳುನಾಟಕ ಕದಂಬ ನಡೆಯಲಿದೆ.
ಮಾ.17 ಸಂಜೆ 7ರಿಂದ ಭಜನ ಕಾರ್ಯಕ್ರಮ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಕಾಶಿಪಟ್ಟ ಇವರಿಂದ ನಡೆಯಲಿದೆ.

Related posts

ಅರಸಿನಮಕ್ಕಿಯ ಪ್ರಮುಖ್ ತುಳುಪುಳೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ

Suddi Udaya

ಬೆಳ್ತಂಗಡಿ ದಿ ಆರ್ಟ್ ಆಫ್ ಲಿವಿಂಗ್ ಆನಂದೋತ್ಸವ ಶಿಬಿರದ ಸಮಾರೋಪ

Suddi Udaya

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

Suddi Udaya

ಉಜಿರೆ ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮದ ವಿಷಯದ ಕುರಿತು ಉಪನ್ಯಾಸ

Suddi Udaya

ಪಬ್ಲಿಕ್ ಪರೀಕ್ಷೆ : ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿದ್ಯಾರ್ಥಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್‍ಯಾಂಕ್: ಉಣ್ಣಾಲು ಕೊಯ್ಯೂರು ಮದರಸಕ್ಕೆ ಶೇಕಡಾ 100 ಫಲಿತಾಂಶ

Suddi Udaya

ಪಿಕಪ್ ಗೂಡ್ಸ್ ವಾಹನ ಕಳ್ಳತನ ಪ್ರಕರಣ: ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya
error: Content is protected !!