22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

ಗೇರುಕಟ್ಟೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಪುತ್ತೂರು ಇದರ ಕ್ಷೀರಸಂಗಮ ಸಭಾ ಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ 180 ನೇ ದಿನದ ಯೋಗದ ನಿತ್ಯ ಪ್ರಾತ್ಯಕ್ಷಿಕೆಯೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ರಕ್ಷಾಬಂಧನದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ಭಾರತ ದೇಶ ಮತ್ತು ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲರೂ ಮಹತ್ವವನ್ನು ನೀಡಿ ಕಂಕಣ ಬದ್ಧರಾಗುವ ಮೂಲಕ ಭಾರತದ ಸಂಸ್ಕೃತಿ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕೆಂದರು.

ಕೇಂದ್ರದ ಸಹ ಶಿಕ್ಷಕ ಸುಕೇಶ, ಸತೀಶ ನಾಳ, ಶಿವಣ್ಣಆಚಾರ್ಯ, ಕೇಂದ್ರದ ಸಂಚಾಲಕರಾದ ವಿಜಯ, ದಿವಾಕರ ಆಚಾರ್ಯ, ಮಧುಕರ, ರಮೇಶ, ಅಶೋಕ ಆಚಾರ್ಯ,ವಸಂತ ಆಚಾರ್ಯ ,ಗಣೇಶ ,ಶುಭಮಂಗಳ,ಪದ್ಮಲತಾ, ಭಾರತಿ, ಧರಿತ್ರಿ ಭಾಗವಹಿಸಿ ಪರಸ್ಪರ ರಕ್ಷಾಬಂಧನವನ್ನು ಮಾಡಿ ಶುಭ ಹಾರೈಸಿದರು.

Related posts

ಖ್ಯಾತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ರವರ ನಿಧನಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ ಸಂತಾಪ

Suddi Udaya

ಅಂತರ್ ರಾಜ್ಯ ಖೋ ಖೋ ಪಂದ್ಯಾಟ: ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ನಯನಾಡು ಸ.ಪ್ರೌ. ಶಾಲೆ ವಿದ್ಯಾರ್ಥಿಗಳು

Suddi Udaya

ತೆಂಕಕಾರಂದೂರು: ಶಾಲಾ ಆವರಣದಲ್ಲಿ ಹೂವಿನ ಕುಂಡಗಳನ್ನು ಪುಡಿಗೊಳಿಸಿದ ಕಿಡಿಗೇಡಿಗಳು

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಹೊಟ್ಟೆನೋವಿನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ್ಯು

Suddi Udaya

ಹದಗೆಟ್ಟಿರುವ ಸೋಮಂತಡ್ಕ ಮಜಲು ರಸ್ತೆ : ಸಂಬಂಧ ಪಟ್ಟವರು ರಸ್ತೆಯ ದುರವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರ ಮನವಿ

Suddi Udaya
error: Content is protected !!