37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ಅಣ್ಣಾಮಲೈ ವಿವಿಯಿಂದ ಡಾಕ್ಟರೇಟ್‌ ಪದವಿ

ಬೆಳ್ತಂಗಡಿ: ನಾರಾವಿ ಗ್ರಾಮದ ಹಿರ್ತ್ತೊಟ್ಟು ಜಿನ್ನಪ್ಪ ಬಿ. ಪೂಜಾರಿ ಅವರ ಪತ್ನಿ, ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ದೊರಕಿದೆ.

ಮಂಗಳೂರಿನ ಬೆಸೆಂಟ್‌ ಮಹಿಳಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ಸೆಕೆಟೇರಿಯಲ್‌ ಪ್ರಾಕ್ಟೀಸ್‌ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಹೇಮಲತಾ ಅವರು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಾಮು ಎನ್‌ ಮತ್ತು ಆರ್‌.ವಿ. ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಬಾಲಾಜಿ ಬೋವಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.

ಹೇಮಲತಾ ಅವರು ಮಂಡಿಸಿದ ‘ಇಂಪ್ಯಾಕ್ಟ್‌ ಆಫ್‌ ಟ್ರೈನಿಂಗ್‌ ಆನ್‌ ದಿ ಸಾಫ್ಟ್‌ ಅಂಡ್‌ ಹಾರ್ಡ್‌ ಸ್ಕಿಲ್ಸ್‌ ಟುವರ್ಡ್ಸ್‌ ಎಫೀಶಿಯೆನ್ಸಿ ಆಫ್‌ ಎಂಪ್ಲಾಯಿಸ್‌ ಆಫ್‌ ಎಂಎಸ್‌ಎಂಇಎಸ್‌ ಇನ್‌ ದಕ್ಷಿಣ ಕನ್ನಡ ಡಿಸ್ಟ್ರಿಕ್‌’ (Impact of training on the Soft and Hard skills towards efficiency of employees of MSMEs in Dakshina Kannada District) ಎಂಬ ಮಹಾಪ್ರಬಂಧ ಡಾಕ್ಟರೇಟ್‌ ಪದವಿಗೆ ಆಯ್ಕೆಯಾಗಿದೆ.

ಹೇಮಲತಾ ಅವರು ಶಿರ್ವ ಮಂಚಕಲ್‌ ಗ್ರಾಮದ ಸೋಮಪ್ಪ ಮತ್ತು ಕಂಪಾಬೈ ದಂಪತಿಯ ಪುತ್ರಿ.

Related posts

ಮೇಲಂತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ಭರತನಾಟ್ಯ ವಿಧ್ವತ್ ಪೂರ್ವ ಪರೀಕ್ಷೆಯಲ್ಲಿ ಗುರುವಾಯನಕೆರೆಯ ಕು. ರಕ್ಷಾ ಶೆಣೈರವರಿಗೆ ಉತ್ತಮ ಶ್ರೇಣಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆ

Suddi Udaya

ಆನ್ ಲೈನ್ ಜಾಬ್ ಆಫರ್ ನೀಡಿ ಮಹಿಳೆಗೆ ರೂ. 4.25 ಲಕ್ಷ ವಂಚನೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಸಂಜೀವಿನಿ ಲೋಕೋಸ್ ತರಬೇತಿ

Suddi Udaya

ಜೂ.23 : ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಸಂಭ್ರಮ: 1 ಕೋಟಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಅಂತಿಮ ಸಿದ್ಧತೆ

Suddi Udaya
error: Content is protected !!