September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಕಡಿರುದ್ಯಾವರ : ಶ್ರೀ ವಿದ್ಯಾ ಸರಸ್ವತಿ ಮಹಿಳಾ ಮಂಡಲ ಹಾಗೂ ಶ್ರೀ ವಿದ್ಯಾ ಸರಸ್ವತಿ ಸ್ವಸಹಾಯ ಸಂಘ ಕಡಿರುದ್ಯಾವರ ಮಹಿಳಾ ಮಂಡಲದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಆ.9 ರಂದು ನಡೆಯಿತು.

ಗುತ್ತಿಗಾರ್ ರಬ್ಬರ್ ಸೊಸೈಟಿ ನಿರ್ದೇಶಕಿ ಶಶಿಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ವಳಂಬ್ರ ವಹಿಸಿದರು.

ಮುಖ್ಯ ಅತಿಥಿಗಳಾಗಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುರೇಖ ಮಂಜುನಾಥ, ಸಂಜೀವಿನಿ ಸಂಘದ ಲೆಕ್ಕ ಪರಿಶೋಧಕಿ ಸುಪ್ರಿಯ ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರ ಪಟ್ಟಿಯನ್ನು ಶ್ರೀಮತಿ ನಳಿನಿ ಓದಿಹೇಳಿದರು. ಕಾರ್ಯಕ್ರಮದಲ್ಲಿ ಸುಮಾರು 43 ರೀತಿಯ ಆಟಿ ಖಾದ್ಯ ಗನ್ನು ಸದಸ್ಯರು ತಯಾರಿಸಿ ಪ್ರದರ್ಶಿಸಿದರು. ಆಟಿ ಆಚರಣೆಯ ಬಗ್ಗೆ ಹಿರಿಯ ನಾಗರಿಕರಾದ ಡೀಕಮ್ಮ ವಿವರಿಸಿದರು.

ಮಹಿಳಾ ಮಂಡಲದ ಕೋಶಾಧಿಕಾರಿ ಸಂಧ್ಯಾ ಕಿರಣ್ ಪ್ರಾರ್ಥಿಸಿ, ಉಪಾಧ್ಯಕ್ಷೆ ರಮಾ ಪರಾಂಜಪೆ ಸ್ವಾಗತಿಸಿದರು. ಭವ್ಯಶ್ರೀ ಧನ್ಯವಾದವಿತ್ತರು. ಭಾರತಿ ಉದ್ದಾರ ಕಾರ್ಯಕ್ರಮ ನಿರೂಪಿಸಿದರು.

Related posts

ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರೋತ್ಸವ ಆಚರಣೆ, ಪ್ರತಿಭಾ ಪ್ರೋತ್ಸಾಹ

Suddi Udaya

ಕುವೆಟ್ಟು: ಪಯ್ಯೋಟ್ಟು ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

Suddi Udaya

ಉಜಿರೆ: ವಿದ್ಯಾನಗರ ನಿವಾಸಿ ಗೀತಾ ಆಚಾರ್ಯ ನಿಧನ

Suddi Udaya

ಆ.4 ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ 137.95 ಕೋಟಿ ವ್ಯವಹಾರ, ರೂ. 53.26 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 9.50 ಡಿವಿಡೆಂಟ್

Suddi Udaya

ಅಪಘಾತವಾದ ಅಂಬುಲೆನ್ಸ್‌ನಲ್ಲಿ‌ದ್ದ‌ ಗಾಯಾಳು ಮಹಿಳೆ ಸಾವು

Suddi Udaya
error: Content is protected !!