30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.14 ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಅರ್ಹ ವಿದ್ಯಾರ್ಥಿಗಳಿಗೆ ರೂ.20 ಲಕ್ಷ ಸ್ಕಾಲರ್ ಸಿಪ್ ಹಸ್ತಾಂತರ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ಸಿಎಸ್ಆರ್ ಫಂಡ್ ನಿಂದ ಸುಮಾರು ರೂ 4.50 ಕೋಟಿ ವೆಚ್ಚದ ಕೆಲಸ ಕಾರ್ಯಗಳು ತಾಲೂಕಿನ ಅನೇಕ ಶಾಲೆಗಳಲ್ಲಿ ನಡೆದಿದೆ.ರೋಟರಿ ಬೆಂಗಳೂರು ಇಂದಿರಾನಗರ ಸಂಸ್ಥೆ ಮತ್ತು ಕ್ಯಾನ್ ಫಿನ್ ಹೋಮ್ಸ್ ಸಹಭಾಗಿತ್ವದಲ್ಲಿ ಕಲ್ಮಂಜ ಸರಕಾರಿ ಪ್ರೌಢ ಶಾಲೆ ಹುಡುಗಿಯರಿಗೆ ನೂತನ ಶೌಚಾಲಯ ನಿರ್ಮಾಣ, ಸರಕಾರಿ ಪ್ರೌಢಶಾಲೆ ಬಂಗಾಡಿ ಇಲ್ಲಿ ಹುಡುಗಿಯರ ಶೌಚಾಲಯವನ್ನು ಆಧುನೀಕರಣಗೊಳಿಸಲಾಗಿದ್ದು ರೂ.17 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಪೂರ್ಣಗೊಂಡಿದೆ.ಜೊತೆಗೆ ಖಾಸಗಿ ಶಾಲೆಯ ಪಿಯುಸಿ ಮತ್ತು ಪ್ರಥಮ ಡಿಗ್ರಿಯ ಅರ್ಹ ಬಡ ಮಕ್ಕಳಿಗೆ ಸುಮಾರು 20 ಲಕ್ಷದಷ್ಟು ಸ್ಕಾಲರ್ ಶಿಪ್ ಹಸ್ತಾಂತರ ಕಾರ್ಯಕ್ರಮವು ಆ. 14 ರಂದು ನಡೆಯಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಹೇಳಿದರು.

ಅವರು ಆ.12 ರಂದು ಬೆಳ್ತಂಗಡಿ ಪತ್ರಿಕಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಸದಸ್ಯರಾದ ರೋ. ವಿದ್ಯಾಕುಮಾರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 60 ಸಾವಿರ ರೂಪಾಯಿ ವ್ಯಯಿಸಿ ಕಲ್ಮಂಜ ಪ್ರೌಢ ಶಾಲೆಗೆ ಕೈ ತೊಳೆಯುವ ವ್ಯವಸ್ಥೆ ಮಾಡಿ ರೋಟರಿ ಕ್ಲಬ್ ಬೆಳ್ತಂಗಡಿಯ ಪ್ಲಾಟಿನಂ ಸದಸ್ಯರ ಪಟ್ಟಿಗೆ ಸೇರಿದ್ದಾರೆ. ಈಗಾಗಲೇ ನಮ್ಮ ಸದಸ್ಯರುಗಳಾದ ಡಾ.ಶಶಿಧರ್ ಡೋಂಗ್ರೆ ಮತ್ತು ಧನಂಜಯ್ ರಾವ್ ಇಂತಹ ಸಾಧನೆ ಮಾಡಿರುತ್ತಾರೆ ಎಂದರು.

ಈ ಎರಡು ಪ್ರಾಜೆಕ್ಟ್‌ಗಳ ಉದ್ಘಾಟನೆ ಜೊತೆಗೆ ಕ್ಯಾನ್ ಪಿನ್ ಸಂಸ್ಥೆ ಲಿಮಿಟೆಡ್ ಬೆಳ್ತಂಗಡಿ ರೋಟರಿ ಕ್ಲಬ್ ಮೂಲಕ ನೀಡಲ್ಪಡುವ ಸುಮಾರು 20 ಲಕ್ಷ ರೂಪಾಯಿ ಸ್ಕಾಲರ್ ಶಿಪ್ ಅನ್ನು, ಬೆಳ್ತಂಗಡಿ ತಾಲೂಕಿನ ಎಲ್ಲಾ ಖಾಸಗೀ ಪಿಯುಸಿ ಮತ್ತು ಡಿಗ್ರಿ ಕಾಲೇಜ್ ಹಾಗೂ ಪಿಜಿ ಕಾಲೇಜಿನ ಒಟ್ಟು 222 ಅರ್ಹ ಬಡ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಕ್ಯಾನ್ ಪಿನ್ ಸಂಸ್ಥೆಯ ಡಿ.ಜಿ.ಎಮ್ ಪ್ರಶಾಂತ ಜೋಷಿ, ರೋಟರಿ ಡಿಸ್ಟ್ರಿಕ್ಟ್ 3181 ಡಿಸ್ಟ್ರಿಕ್ಟ್ ಗವರ್ನರ್ ರೋ.ರಾಮಕೃಷ್ಣ ಪಿ.ಕೆ,ರೋಟರಿ ಬೆಂಗಳೂರು ಇಂದಿರಾನಗರದ ಕಳೆದ ಸಾಲಿನ ಅಧ್ಯಕ್ಷೆ ರೋ.ಸುಪ್ರಿಯ ಖಾಂದಾರಿ, ಕ್ಯಾನ್ ಫಿನ್ ಹೋಮ್ಸ್ ನ ಡೆಪ್ಯೂಟಿ ಮೆನೇಜರ್ ಚಿತ್ರಾಂಗದ ಸಾರಂಗಿ,ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ‌.ಮೋಹನ್ ಕುಮಾರ್ ಇವರು ಭಾಗವಹಿಸಲಿದ್ದಾರೆ ಎಂದರು.

ಈಗಾಗಲೇ ರೋಟರಿ ಬೆಂಗಳೂರು ಇಂದಿರಾನಗರ ಸಂಸ್ಥೆಯೊಡನೆ ಮೂರು ವರ್ಷಕ್ಕೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಅದರ ಪ್ರಕಾರ, ಈ ವರ್ಷ ಸುಮಾರು 10 ಲಕ್ಷ ಸ್ಕಾಲರ್ ಶಿಪ್ ನ್ನು ಮುಂದಿನ ದಿನಗಳಲ್ಲಿ ಸರಕಾರಿ ಪಿಯುಸಿ ಮತ್ತು ಡಿಗ್ರಿ ಮಕ್ಕಳಿಗೆ ನೀಡುವ ಪ್ರಯತ್ನ ಮಾಡಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಸ್ಕಾಲರ್ ಶಿಪ್ ಕಮಿಟಿ ಚೆಯರ್ ಮೆನ್ ಅಬೂಬಕ್ಕರ್,ಪೂರ್ವಾಧ್ಯಕ್ಷ ಯಶವಂತ್ ಪಟವರ್ಧನ್ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿಯಲ್ಲಿ ಪ್ರಥಮವಾಗಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ ನಲ್ಲಿ ಜೂಫಿಟರ್ 113 ಸಿಸಿ ಸ್ಕೂಟಿ, ಮಾರುಕಟ್ಟೆಗೆ ಬಿಡುಗಡೆ

Suddi Udaya

ಲೋಕಸಭೆ ಚುನಾವಣೆ ಹಿನ್ನಲೆ: ಬೆಳ್ತಂಗಡಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕ‌ರ್ ಮತ್ತು ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ. ವರ್ಗಾವಣೆ

Suddi Udaya

ಎ.9: ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಯಾತ್ರೆ

Suddi Udaya

ಮಚ್ಚಿನ ಪ್ರಾಥಮಿಕ ಶಾಲೆ ಕೆಪಿಎಸ್‌ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆ : ಶಾಲಾ ಅಭಿವೃದ್ಧಿ ಸಮಿತಿಯಿಂದ ರಕ್ಷಿತ್ ಶಿವರಾಂ ರಿಗೆ ಅಭಿನಂದನೆ ಸಲ್ಲಿಕೆ

Suddi Udaya

ಶಿಶಿಲೇಶ್ವರ ದೇವಸ್ಥಾನದಲ್ಲಿ ಊರವರಿಂದ ಶ್ರಮದಾನ

Suddi Udaya
error: Content is protected !!