ಇಂದಬೆಟ್ಟು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ ನೂತನ ಎಸ್‌ಡಿಎಂಸಿ ಸಮಿತಿಯ ರಚಿಸಲಾಯಿತು.
ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾಗಿ ಆನಂದ ಕೊಪ್ಪದ ಕೋಡಿ, ಉಪಾಧ್ಯಕ್ಷೆಯಾಗಿ ಸುಂದರಿ ಆಯ್ಕೆಯಾದರು.
ಸದಸ್ಯರಾಗಿ ಸುಧಾಕರ, ಜಾನಕಿ ಶೀನಪ್ಪ, ಇಸುಬು, ಮೈಮುನ, ಶೈನಾಜ್, ಧರ್ಣಪ್ಪ ,ಜಗದೀಶ್ ಕೊಪ್ಪದ ಕೋಡಿ, ಹರೀಶ್ ಕಲ್ಲಾಜೆ, ಸತೀಶ್ ಕಟ್ನಡ್ಕ, ಯೋಗೀಶ್ ಬಂಗೇರ, ಮಾಲತಿ, ಹೇಮಾವತಿ, ಹೇಮಲತಾ, ರಜಿತ ಜಯಶ್ರೀ ಆಯ್ಕೆಗೊಂಡರು. ಪದ ನಿಮಿತ್ತ ಸದಸ್ಯರಾಗಿ ಮುಖ್ಯ ಶಿಕ್ಷಕಿ ದೀಪಾ, ಆರೋಗ್ಯ ಕಾರ್ಯಕರ್ತೆ ವೀಣಾ, ಅಂಗನವಾಡಿ ಕಾರ್ಯಕರ್ತೆ ಲೀಲಾವತಿ ನೇಮಕಗೊಂಡರು.
ನಾಮ ನಿರ್ದೇಶಿತ ಸದಸ್ಯರಾಗಿ ಆನಂದ ಅಡಿಲು, ಶಾಲಾ ಶಿಕ್ಷಕಿ ಮೇಘ, ಶಾಲಾ ವಿದ್ಯಾರ್ಥಿ ಅಖಿಲೇಶ್ ನೇಮಕಗೊಂಡರು. ನೂತನ ಎಸ್‌ಡಿಎಂಸಿ ಸಮಿತಿಗೆ ಶುಭ ಹಾರೈಸಲಾಯಿತು ಹಾಗೂ ಜವಾಬ್ದಾರಿಗಳನ್ನು ತಿಳಿಸಲಾಯಿತು. ಅತಿಥಿ ಶಿಕ್ಷಕಿ ಸುಜಾತ ಧನ್ಯವಾದವಿತ್ತರು.











