ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಿತ್ತಬಾಗಿಲು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಮಿತ್ತಬಾಗಿಲು : ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 10 ರಂದು ನಡೆದ ಮಿತ್ತಬಾಗಿಲು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆ ಕುಕ್ಕಾವು ಶ್ರೀ ಸದಾಶಿವೇಶ್ವರ ದೇವಸ್ಥಾನ ವಠಾರ ದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ವಾಸುದೇವ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಸಕ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಯುವ ವಕೀಲರಾದ ಯತೀಶ್ ಪಣೆಕ್ಕರ, ಮಂಡಲ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲ್, ವೃಷಾಂಕ್ ಖಾಡಿಲ್ಕರ್ ಬೈಠಕ್ ನೀಡಿದರು. ಲಾಯಿಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅರವಿಂದ್ ಲಾಯಿಲ, ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ಗಣೇಶ್ ಗೌಡ ನಾವೂರು, ಮಂಡಲ ಉಪಾಧ್ಯಕ್ಷ ಅಭ್ಯಾಸ ವರ್ಗ ಸಂಚಾಲಕ ಕೊರಗಪ್ಪ ಗೌಡ ಚಾರ್ಮಾಡಿ, ಪ್ರಭಾರಿ ಗಿರೀಶ್ ಡೊಂಗ್ರೆ, ಮಿತ್ತಬಾಗಿಲು ಪಂಚಾಯತ್ ಅಧ್ಯಕ್ಷ ವಿನಯ ಚಂದ್ರ, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಅನ್ಯನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : ಐದು ದಿನಗಳ ರಾಷ್ಟ್ರ ಮಟ್ಟದ ಎಫ್.ಡಿ.ಪಿ ಕಾರ್ಯಾಗಾರಕ್ಕೆ ಚಾಲನೆ

Suddi Udaya

ದುರ್ಗಾ ಫ್ರೆಂಡ್ಸ್ ಕಲ್ಲಡ್ಕ : ಬೃಹತ್ ರಕ್ತದಾನ ಮತ್ತು ಉಚಿತ ಕಣ್ಣು ಹಾಗೂ ದಂತ ತಪಾಸಣಾ ಶಿಬಿರ

Suddi Udaya

ಕನ್ಯಾಡಿ ಸೇವಾನಿಕೇತನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮುಂಡಾಜೆ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ ಗೆ ರಾಜ್ಯ ಪ್ರಶಸ್ತಿ

Suddi Udaya

ಮುಂಡಾಜೆ: ರಿಕ್ಷಾ-ಪಿಕಪ್ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

Suddi Udaya

ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ

Suddi Udaya
error: Content is protected !!