ಮಡಂತ್ಯಾರು : ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟವು ಪಲ್ಕ್ ಲಕ್ಷ್ಮಿ ಗದ್ದೆಯಲ್ಲಿ ಆ.10 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪೂವಪ್ಪ ಮೂಲ್ಯ ಬಂಗಿದೊಟ್ಟು ಪ್ರಗತಿಪರ ಕೃಷಿಕರು ಇವರ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯದ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ವಿಜಯ ಮಡಕ್ಕಿಲ್ಲ ವಹಿಸಿದರು.

ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ , ಶ್ರೀ ಕ್ಷೇತ್ರ ನಡಿಬೆಟ್ಟು ಆಡಳಿತ ಮೊಕ್ತೇಶರರು ವಿಶ್ವನಾಥ ಮೂಲ್ಯ ನಡಿಬೆಟ್ಟು, ಮಂಗಳೂರು ಗೋಕರ್ಣನಾಥ ಕೋ ಆಪರೇಟರ್ ಬ್ಯಾಂಕ್ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ಕಾರಂದೂರು, ದ. ಕ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಸಂತಿ ಲಕ್ಷ್ಮಣ್, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಡೀಕಮ್ಮ ಮಡಕ್ಕಿಲ್ಲ, ಶ್ರೀಮತಿ ಜಯಶ್ರೀ ವಡ್ಡ, ಶ್ರೀಮತಿ ಸುಜಾತ ಪಿ ಸಾಲಿಯನ್ ಕೃಷಿ ಪತ್ತಿನ ಸಹಕಾರಿ ಸಂಘ ಮಚ್ಚಿನ, ಬಳ್ಳಮಂಜ ಮೂಲ್ಯರ ಯಾನೆ ಕುಂಬಾರ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ಭವ್ಯ ಜಯರಾಮ್, ಶ್ರೀಮತಿ ಸ್ವಾತಿ ಪ್ರದೀಪ್ ನ್ಯಾಯವಾದಿಗಳು ಮಂಗಳೂರು ಇವರು ಉಪಸ್ಥಿತರಿದ್ದರು.
ಹರ್ಷ ಬಳ್ಳಮಂಜ ಸ್ವಾಗತಿಸಿ, ದಿನೇಶ್ ಮಾಲಾಡಿ ವಂದಿಸಿದರು. ಕೆಸರ್ದ ಗದ್ದೆಯನ್ನು ವಿಶ್ವನಾಥ ಮೂಲ್ಯ ನಡಿಬೆಟ್ಟು ಗದ್ದೆಗೆ ಹಾಲು ಹಾಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳಿಗೆ ಯುವಕರಿಗೆ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು.
ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರದ ಯುವ ವೇದಿಕೆಯ ಮಡಂತ್ಯಾರು ವಲಯದ ಅಧ್ಯಕ್ಷ ಸಚಿನ್ ಬಿ ಕುಲಾಲ್ ವಹಿಸಿದರು.
ದ. ಕ ಜಿಲ್ಲಾ ಮೂಲ್ಯರ ಯಾನೆ ಕುಂಬಾರರ ಸಂಘ ಅಧ್ಯಕ್ಷ ಮಯೂರ್ ಉಳ್ಳಾಲ್, ಹೊನ್ನಪ್ಪ ಕುಲಾಲ್ ಮಣುರ್ ಅಧ್ಯಕ್ಷರು ಸಪರಿವಾರ ಶ್ರೀ ಶಾಸ್ತ್ರವು ದೇವಸ್ಥಾನ ಮಣುರ್, ಗಂಗಾಧರ ಮೂಲ್ಯ ಪೆರ್ನಡ್ಡ ಯಕ್ಷನ್ ಕುಲಾಲ್ ಕಾರ್ಯನಿರ್ವಾಹಣಾಧಿಕಾರಿ ಕೃಷಿ ಪತ್ತಿನ ಸಹಕಾರಿ ಸಂಘ ಮಚ್ಚಿನ , ಆಕಾಶ್ ಕುಲಾಲ್ ಮಣುರ್ ಉದ್ಯಮಿಗಳು ಬೆಂಗಳೂರು, ರವಿಚಂದ್ರ ಕಲ್ಲಗುಡ್ಡೆ ಸದಸ್ಯರು ಗ್ರಾಮ ಪಂಚಾಯತ್ ಮಚ್ಚಿನ, ಉಮೇಶ್ ಕಲ್ಲಗುಡ್ಡೆ ನಿರ್ದೇಶಕರು ಕೃಷಿ ಪತ್ತಿನ ಸಹಕಾರಿ ಸಂಘ ಮಚ್ಚಿನ, ಜಯಂತ್ ಕುಲಾಲ್ ಮಾಲಾಡಿ ಮಾಲಕರು ನಾಗಬ್ರಹ್ಮ ಎಲೆಕ್ಟ್ರಿಕಲ್ ಮಡoತ್ಯಾರ್, ವಿಠಲ್ ಮೂಲ್ಯ ಮುಡೋಟ್ಟು. ಅಧ್ಯಕ್ಷರು ಗೆಳೆಯರ ಬಳಗ ಮಾಲಾಡಿ , ಪ್ರದೀಪ್ ಅತ್ತವರ ಕಿರಣ್ ಅಂಟ್ಟೂರು ಉಪಸ್ಥಿತರಿದ್ದರು.
ಈ ವೇಲೆ ಅಂಚೆ ವಿತರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಪ್ಪ ಮೂಲ್ಯ ಬಳ್ಳಮಂಜ ಓಬಯ್ಯ ಮೂಲ್ಯ ವಡ್ಡ ಇವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆದ ವಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು . ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಬಳ್ಳಮಂಜ ಸ್ವಾಗತಿಸಿ, ಕೋಶಾಧಿಕಾರಿ ಚಿದಾನಂದ ಧನ್ಯವಾದ ನೀಡಿದರು .
✍️ವರದಿ ಹರ್ಷ ಬಳ್ಳಮಂಜ











