ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ


ಧರ್ಮಸ್ಥಳ: ಶ್ರೀ ಧ ಮ ಆಂಗ್ಲ ಮಾಧ್ಯಮ ಧರ್ಮಸ್ಥಳದ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪರಿಸರ ಹಾಗೂ ದೇಶಭಕ್ತಿಯನ್ನು ಬಿಂಬಿಸುವ ಹಾಡು ನೃತ್ಯ , ಭಾಷಣ ಅಭಿನಯ ಗೀತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿಯಾಗಿ ಶ್ರೀ ಧ ಮ ತಾಂತ್ರಿಕ ವಿದ್ಯಾಲಯದ ಮುಖ್ಯ ಗ್ರಂಥಪಾಲಕಿ ಡಾ .ರಜತ ಪಿ. ಶೆಟ್ಟಿ ಆಗಮಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ಸೂಚಿಸಿ ,ಪ್ರಕ್ರತಿಯ ನಡುವೆ ಮಕ್ಕಳು ಹೇಗೆ ಬೆಳೆಯಬೇಕು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ ವಿ ಅವರ ಮಾರ್ಗದರ್ಶನದೊಂದಿಗೆ ಮೂಡಿಬಂದ ಕಾರ್ಯಕ್ರಮ, ದೇಶಭಕ್ತಿ ಗೀತೆಯೊಂದಿಗೆ ಪ್ರಾರಂಭವಾಗಿ , ಶಾಲಾ ವಿದ್ಯಾರ್ಥಿನಿ ಕು| ಸಾನ್ವಿತ ಹಾಗೂ ಸಮನ್ವೀ ಸ್ವಾಗತಿಸಿದರು . ಕುಮಾರಿ ಶ್ರೇಯಸಿ ಹಾಗೂ ವಿಹಾನ್ ಕಾರ್ಯಕ್ರಮವನ್ನು ನಿರೂಪಿಸಿ, ಸಾನಿಧ್ಯ ಹಾಗೂ ಆರುಹಿ ಧನ್ಯವಾದವನ್ನು ಅರ್ಪಿಸಿದರು. ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಹೆತ್ತವರು ಸಹಕರಿಸಿದರು.

Related posts

ಕಳೆಂಜ ಗ್ರಾ.ಪಂ. ನಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ: ಸರಕಾರಕ್ಕೆ ಮನವಿ

Suddi Udaya

ಸೆ.19(ನಾಳೆ): ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆ

Suddi Udaya

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

Suddi Udaya

ರಾಜ್ಯಮಟ್ಟದ ಪರೀಕ್ಷೆಯಲ್ಲಿ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆಗೆ ಉಪ ಪ್ರಾಂಶುಪಾಲರಿಂದ ಮೆಚ್ಚುಗೆ

Suddi Udaya

ಪಡಂಗಡಿಯ ಮುಬಿನ್ ರವರಿಂದ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಹೆಚ್ ರಿಗೆ ಫ್ಯಾನ್‌ ಕೊಡುಗೆ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!