ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡಾಜೆ ವಲಯದ ಕಲ್ಮಂಜ ಒಕ್ಕೂಟದ ಧಾರಿಣಿ ತಂಡದ ಸದಸ್ಯೆ ಹೇಮಾವತಿ ರವರ ಮಗನಾದ ದುರ್ಗಾಪ್ರಸಾದ್ ಬೈಕ್ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಒಟ್ಟು 4.5ಲಕ್ಷ ದವರೆಗೆ ಚಿಕಿತ್ಸೆ ವೆಚ್ಚ ಖರ್ಚಾ ಗಿದ್ದು, ಮುಂದಿನ ಚಿಕಿತ್ಸೆಗಾಗಿ ಯೋಜನೆಯಿಂದ ಪೂಜ್ಯರು ರೂ 25000/-ಮೊತ್ತದ ಸಹಾಯ ಧನ ನೀಡಿದ್ದು ಇದರ ಮಂಜೂರಾತಿ ಪತ್ರ ವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶಶಿಧರ ಮಡಿವಾಳ ಇವರು ತಾಯಿ ಹೇಮಾವತಿರವರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ಸದಸ್ಯರಾದ ವಸಂತ ಮಡಿವಾಳ, ಒಕ್ಕೂಟದ ಅಧ್ಯಕ್ಷ ಬಿ.ಎನ್ ಹಮೀದ್, ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ಧನ, ಕಲ್ಮಂಜ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜಿಶಾ, ಶೌರ್ಯದ ಸುಧೀರ್ ಮತ್ತು ಮನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.











