September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣರಿಗೆ ಹುಟ್ಟೂರ ಅಭಿನಂದನೆ

ಕಾಶಿಪಟ್ಣ: ಸಮಾಜದಲ್ಲಿ ಸಾಧನೆ ಮಾಡಿದ ಸಾಧಕನನ್ನು ಗೌರವಿಸುವುದು ನಿಜವಾದ ಧರ್ಮ. ಅಪೂರ್ವವಾದ ಸಾಧನೆ ಮಾಡಿದ ಸತೀಶ್ ಕುಮಾರ್ ರವರು ಸೌಮ್ಯ ಸ್ವಭಾವದ ಗುಣವಂತರು. ಕಾರ್ಯ ಸಾಧನೆ ಮಾಡಲು ದೇವರ ಪೂರ್ಣ ಅನುಗ್ರಹವಿರಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತಪದ್ಮನಾಭ ಅಸ್ರಣ್ಣರು ಆಶೀರ್ವಚನ ನೀಡಿದರು.

ಅವರು ಡಿ 17 ರಂದು ಕಾಶಿಪಟ್ಣ ಗರಡಿ ಮೈದಾನದಲ್ಲಿ ನಡೆದ ರಾಜ್ಯದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಹಕಾರಿ ಧುರೀಣ ಸತೀಶ್ ಕೆ. ಕಾಶಿಪಟ್ಣರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಹಕಾರಿ ರಂಗದಲ್ಲಿ ಸತೀಸ್ ಅವರ ಸಾಧನೆ ಉಚ್ಚಪ್ರಾಯದ್ದು,ಇನ್ನಷ್ಟು ಸಾಧನೆ ಮಾಡುವಲ್ಲಿ ಎಲ್ಲರ ಆಶೀರ್ವಾದ ಅವರ ಮೇಲಿರಲಿ ಎಂದರು.

ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲರು ಸತೀಶ್ ದಂಪತಿಗಳಿಗೆ ಸನ್ಮಾನ ನೇರವೇರಿಸಿ ಶುಭ ಹಾರೈಸಿದರು.

ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ವಹಿಸಿದ್ದರು.

ವೈಭವದ ಮೆರವಣಿಗೆ:
ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಭವ್ಯ ಮೆರವಣಿಗೆ ನಡೆಯಿತು.ಕಾಶಿಪಟ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಅಭಿನಂದನಾ ಕಾರ್ಯಕ್ರಮ, ಮೂಡಬಿದ್ರೆ ‘ಪಿಂಗಾರ ಕಲಾವಿದರಿಂದ ‘ಓಂಕಾರ’ ನಾಟಕ, ಆಗಮಿಸುವ ಅಥಿತಿ ಅಭ್ಯಾಗತರಿಗೆ ಉಪಹಾರದ ವ್ಯವಸ್ಥೆ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು‌

ವೇದಿಕೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರು ಸದಾಶಿವ ಉಳ್ಳಾಲ್,
ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ,ಮೂಡಬಿದ್ರೆ ನಿಶ್ಮಿತಾ ಟವರ್ಸ್, ನಾರಾಯಣ ಪಿ. ಎಂ.,ಕಾಶಿಪಟ್ಣ ಗ್ರಾ.ಪಂ.ಉಪಾಧ್ಯಕ್ಷೆ ಶುಭವಿ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ,ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಮೂಡ ಸದಸ್ಯ ಬೇಬಿ ಕುಂದರ್, ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವೃಂದಾ ಪಿ.ಎಸ್., ಶಿರ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಚಿಂತನ್ ಲೋಬೋ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಕುವೈಟ್ ಉದ್ಯಮಿ ರಿಚಾರ್ಡ್ ಜಾರ್ಜ್ ಪಿಂಟೋ, ಪೆರಾಡಿ ಪ್ಯಾಕ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ, ಬೆಳ್ತಂಗಡಿ ಕೃಷಿಕ ಸಮಾಜ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ.ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷೆ ವನಿತಾ ಉಪಸ್ಥಿತರಿದ್ದರು.

ಅಭಿನಂದನಾ ಸಮಿತಿ ಕಾರ್ಯದರ್ಶಿ ಮನೋಜ್ ಕಾಶಿಪಟ್ಣ ಸ್ವಾಗತಿಸಿದರು. ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಪ್ರಾಧ್ಯಾಪಕ ದೇವುದಾಸ್ ನಾಯಕ್ ಮತ್ತು ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.ಗ್ರಾ.ಪಂ ಮಾಜಿ ಸದಸ್ಯ ಮಹಮ್ಮದ್ ಶಾಫಿ ವಂದಿಸಿದರು.

Related posts

ಬೆಳ್ತಂಗಡಿ ಪ.ಪಂ. ಆಡಳಿತಾಧಿಕಾರಿಯಾಗಿ ತಹಶೀಲ್ದಾರ ಟಿ. ಸುರೇಶ್‌ ಕುಮಾರ್ ಅಧಿಕಾರ ಸ್ವೀಕಾರ

Suddi Udaya

ಮಚ್ಚಿನ: ಬಂಗೇರಕಟ್ಟೆ ಕಲ್ಲಗುಡ್ಡೆಯಲ್ಲಿ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

Suddi Udaya

ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವ ಸಲಹೆಗಾರರಾಗಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ

Suddi Udaya

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ವಸಂತ ಮರಕ್ಕಡ, ಕಾರ್ಯದರ್ಶಿಯಾಗಿ ನವೀನ್ ಬಿ.ಕೆ ಆಯ್ಕೆ

Suddi Udaya

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya
error: Content is protected !!