ಬಳಂಜ: ಕಳೆದೆರೆಡು ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಗುರುತಿಸಿಕೊಂಡ ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 3ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ.17 ರಂದು ನಿಟ್ಟಡ್ಕ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಳಿಗ್ಗೆ ಕ್ರೀಡಾಕೂಟದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ನಿಕಟಪೂರ್ವಾಧ್ಯಕ್ಷ ಲ|ದೇವದಾಸ್ ಶೆಟ್ಟಿ ನೆರವೇರಿಸಲಿದ್ದಾರೆ.ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ನೆರವೇರಿಸಲಿದ್ದಾರೆ.ಅಳದಂಗಡಿ ಸಿ.ಎ. ಬ್ಯಾಂಕಿನ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಉಜಿರೆ ಇದರ ಮಾಲಕ ಮೋಹನ್ ಕುಮಾರ್, ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು., ಪವರ್ ಆನ್ ಬ್ಯಾಟರಿ ಬೆಳ್ತಂಗಡಿ ಇದರ ಮಾಲಕ ಶೀತಲ್ ಜೈನ್, ಯುವ ಉದ್ಯಮಿ ಪ್ರದೀಪ್ ಕೋಟ್ಯಾನ್ ಕೆಂಪುಂರ್ಜ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿರುವರು.
ಸಾಧಕರಿಗೆ ಸನ್ಮಾನ
ಅಳದಂಗಡಿ ಶ್ರೀ ಕ್ಲಿನಿಕ್ ನ ಪ್ರಸಿದ್ಧ ವೈದ್ಯ ಡಾ| ಎನ್.ಎಂ. ತುಳಪುಳೆ, ಬದನಾಜೆ ಸ.ಉ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ನಿರಂಜನ್ ಉಜಿರೆರವರು ಸನ್ಮಾನ ಸ್ವೀಕರಿಸಲಿರುವರು.ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ 7ನೇ ಸ್ಥಾನಿಯಾದ ಕು.ಸನ್ನಿಧಿ ಎಸ್. ಹೆಗ್ಡೆ, ರಾಷ್ಟ್ರಮಟ್ಟದ ಕ್ರೀಡಾ ಸಾಧಕಿ ಕು. ಸುಷ್ಮಾ ಬಿ. ಪೂಜಾರಿ ಯೈಕುರಿ ಹಾಗೂಪಿ.ಯು.ಸಿ ಸಾಧಕಿ ಕು.ರಿತಿಕಾ ಪೂಜಾರಿರವರನ್ನು ಗೌರವಿಸಲಾಗುವುದು ಸಂಘಟಕರು ತಿಳಿಸಿದ್ದಾರೆ.
ವಿವಿಧ ಕ್ರೀಡೆಗಳು
ಬಾಲಕ, ಬಾಲಕಿಯರಿಗೆ •ಲಿಂಬೆ ಚಮಚ •ಸಂಗೀತ ಕುರ್ಚಿ •ಲಕ್ಕಿ ಗೇಮ್ •ಮಡಿಕೆ ಒಡೆಯುವುದು •ಭಕ್ತಿ ಗೀತೆ ಸ್ಪರ್ಧೆ •ಫನ್ನಿ ಗೇಮ್ಸ್ •ಗೋಣಿ ಚೀಲ ಓಟ. ಮಹಿಳೆಯರಿಗೆ: •ಹಗ್ಗ ಜಗ್ಗಾಟ •ಸಂಗೀತ ಕುರ್ಚಿ •ಲಕ್ಕಿ ಗೇಮ್ •ಮಡಿಕೆ ಒಡೆಯುವುದು •ಫನ್ನಿ ಗೇಮ್ಸ್ •ತ್ರೋಬಾಲ್ •ಭಕ್ತಿಗೀತೆ. ಪುರುಷರಿಗೆ ವಾಲಿಬಾಲ್,ಹಗ್ಗಜಗ್ಗಾಟ ,ನಿಧಿ ಶೋಧ ಮತ್ತು ಗುಡ್ಡಗಾಡು ಓಟ,ಫನ್ನಿ ಗೇಮ್ಸ್ ಇರುತ್ತದೆ.
ರಂಗಿನ ಹೋಳಿ ಬಣ್ಣದ ಓಕುಳಿ
ವಿಶೇಷ ಆಕರ್ಷಣೆಯಾಗಿ ಮೊಸರು ಕುಡಿಕೆ ಉತ್ಸವದಲ್ಲಿ ರಂಗಿನ ಹೋಳಿ ಬಣ್ಣದ ಓಕುಳಿ ಜರುಗಲಿರುವುದು.ಸುಮಾರು 100 ಕ್ಕಿಂತ ಹೆಚ್ಚು ಮಣ್ಣಿನ ಮಡಕೆಯನ್ನು ಕಟ್ಟಲಾಗುತ್ತದೆ. ಬಳಿಕ ಅದಕ್ಕೆ ಮೊಸರು, ಕಲರ್ ಮತ್ತು ನೀರು ತುಂಬಲಾಗುತ್ತದೆ.ಒಂದೊಂದು ತಂಡಕ್ಕೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುತ್ತೆದೆ.ಎಲ್ಲಾ ಮಡಕೆ ಒಡೆದ ತಂಡಕ್ಕೆ ಬಹುಮಾನ ನೀಡಲಾಗುತ್ತದೆ.
ಮತ್ತೆ ಬಂದಿದೆ ತಾಲೂಕು ಮಟ್ಟದ ಕೃಷ್ಣ ವೇಷ ಸ್ಪರ್ಧೆ:
ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಮುದ್ದು ಮಕ್ಕಳಿಗೆ ವಿಶೇಷವಾಗಿ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಿದೆ. ಮುದ್ದುಕೃಷ್ಣ ಸ್ಪರ್ಧೆ (3 ವರ್ಷದ ಒಳಗಿನ ಮಕ್ಕಳಿಗೆ), ಬಾಲಕೃಷ್ಣ (3 ರಿಂದ 6 ವರ್ಷದ ಮಕ್ಕಳಿಗೆ) ಎರಡು ವಿಭಾಗಕ್ಕೂ ಕ್ರಮವಾಗಿ ಪ್ರಥಮ ಬಹುಮಾನ ರೂ. 2000/- ಮತ್ತು ಸ್ಮರಣಿಕೆ, ದ್ವಿತೀಯ ರೂ. 1500/- ಮತ್ತು ಸ್ಮರಣಿಕೆ(1 ನಿಮಿಷದ ಸಮಯಾವಕಾಶ ನೀಡಲಾಗುವುದು.) ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಚಂದ್ರಹಾಸ ಬಳಂಜ ಮೊ:8971689755 ಈ ನಂಬರನ್ನು ಸಂಪರ್ಕಿಸಬಹುದು.











