September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಆ.17: ಮಡಂತ್ಯಾರು ಸಿಂಧೂರ ವೇದಿಕೆಯಲ್ಲಿ ಮೊಸರು ಕುಡಿಕೆ ಉತ್ಸವ ಸಂಭ್ರಮ

ಮಡಂತ್ಯಾರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 36ನೇ ವರ್ಷದ ಮೊಸರು ಕುಡಿಕೆ ಉತ್ಸವವು ಆ. 17ರಂದು ಮಡಂತ್ಯಾರು ಗಣಪತಿ ಮಂಟಪದ ಸಿಂಧೂರ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿರುವುದು.

ಶ್ರೀ ಕ್ಷೇತ್ರ ಬಳ್ಳಮಂಜದ ಆನುವಂಶೀಯ ಆಡಳಿತ ಮೊಕ್ತೇಸರರು ಡಾ| ಹರ್ಷ ಸಂಪಿಗೆತ್ತಾಯ ಉದ್ಘಾಟಿಸಲಿರುವರು.
ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರು ನಾಗೇಶ್ ಪ್ರಭು ಅಧ್ಯಕ್ಷತೆಯನ್ನು ವಹಿಸಲಿರುವರು. ಕಿರಣ್ ಕುಮಾರ್ ಮಂಜಿಲ ‘ಕಾಮಧೇನು’ ಆರಂಬೋಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ಸಮಾರೋಪ ಸಮಾರಂಭದಲ್ಲಿ ಗುರುನಮನ ಕಾರ್ಯಕ್ರಮ ನಡೆಯಲಿದ್ದು ಸಂಸದ ಕ್ಯಾ| ಬ್ರಿಜೇಶ್ ಚೌಟ ಗುರುನಮನ ನೆರವೇರಿಸಲಿರುವರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಉದ್ಯಮಿ ಸತೀಶ್‌ ಶೆಟ್ಟಿ, ಬೋಳದಗುತ್ತು, ನಿಖಿಲ್ ಪಿ. ಬಂಗೇರ, ‘ಪ್ರಕೃತಿ’, ಮದ್ದಡ್ಕ, ಆಕಾಶ್ ಮಾಣೂರು ಭಾಗವಹಿಸಲಿರುವರು.

ವಿವಿಧ ಆಟೋಟಗಳು: ಬೈಕ್ ರೇಸ್, ತ್ರೋಬಾಲ್, ಕ್ರಾಸ್ ಕಂಟ್ರಿ, ಹಗ್ಗ ಜಗ್ಗಾಟ ,ಶ್ರೀ ಕೃಷ್ಣ ವೇಷ, ರೀಲ್ಸ್ ಸ್ಪರ್ಧೆ, ಅಡಿಕೆ ಮರ ಏರುವುದು, ಗೋಣಿಚೀಲ ಓಟ, ರಂಗೋಲಿ, ಸ್ಲೋ ಸೈಕಲ್ ಬ್ಯಾಲೆನ್ಸ್, ಮೊಸರು ಕುಡಿಕೆ, ಗೋವಿಂದ ಸ್ಪರ್ಧೆ ಏರ್ಪಡಿಸಲಾಗಿದೆ.

ಸಂಜೆ ಗಂಟೆ 5ರಿಂದ ಮಡಂತ್ಯಾರು ಸೇವಾ ಸಹಕಾರಿ ಬ್ಯಾಂಕಿನ ಬಳಿಯಿಂದ ಪ್ರಸಿದ್ಧ ಕುಣಿತ ಭಜನಾ ತಂಡಗಳೊಂದಿಗೆ ಶ್ರೀ ಕೃಷ್ಣನ ವೈಭವದ ಮೆರವಣಿಗೆ ಹಾಗೂ. ರಾತ್ರಿ 8 ರಿಂದ ನೃತ್ಯ ವೈಭವ ಜರಗಲಿರುವುದು ಎಂದು ಸಮಿತಿ ಅಧ್ಯಕ್ಷ ಪ್ರಶಾಂತ್ ಎಂ ಪಾರೆಂಕಿ ತಿಳಿಸಿದ್ದಾರೆ.

Related posts

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಸಹ ಸಂಸ್ಥೆ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನಲ್ಲಿ ವೈದ್ಯರ ದಿನಾಚರಣೆ: ಹಿರಿಯ ವೈದ್ಯ ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರಿಗೆ ಸನ್ಮಾನ

Suddi Udaya

ನಡ ಸ.ಪ.ಪೂ. ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಗೆ ನುಡಿನಮನ

Suddi Udaya

ಇಂದಬೆಟ್ಟು: ದಿ| ತುಷಾರ್ ರವರ ನುಡಿನಮನ ಕಾರ್ಯಕ್ರಮದಲ್ಲಿ ರೂ.40,305 ಉಳಿಕೆ ಮೊತ್ತವನ್ನು ನಂದಗೋಕುಲ ಗೋಶಾಲೆಗೆ ಹಸ್ತಾಂತರ

Suddi Udaya

ಬೆಳ್ತಂಗಡಿಯಲ್ಲಿ ರಾಜಸ್ಥಾನ ಆರ್ಟ್‌ ಹಾಗೂ ಕ್ರಾಫ್ಟ್ ಬೃಹತ್ ಪ್ರದರ್ಶನ, ಮಾರಾಟ ಮೇಳ

Suddi Udaya

ಸೋಮಂತಡ್ಕದಲ್ಲಿ ರಾಮನಾಮ ಸಂಕೀರ್ತನೆ ಕಾರ್ಯಕ್ರಮ: ಕರಸೇವಕ ಸುರೇಶ್ ಭಟ್ ಕೊಲ್ಯ ರವರಿಗೆ ಗೌರವಾರ್ಪಣೆ

Suddi Udaya

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಾಧನ ಪ್ರಶಸ್ತಿ

Suddi Udaya
error: Content is protected !!