ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಆಟಿ ಕೂಟ – ಮೆರಗು ತಂದ ಆಟಿ ಕಳೆಂಜ : ರಂಗೇರಿಸಿದ ಮಹಿಳೆಯರ ಕೋರಿದ ಕಟ್ಟ ಡ್ಯಾನ್ಸ್

ಬೆಳ್ತಂಗಡಿ: ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್ ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ನೇತೃತ್ವದಲ್ಲಿ ಆಟಿದ ಕೂಟ ಕಾರ್ಯಕ್ರಮ ಆ.14 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ನೇತ್ರಾವತಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಧುರ ಅಧ್ಯಕ್ಷತೆ ವಹಿಸಿದ್ದರು.

ತೆಂಗಿನ ಹಿಂಗಾರು ಸೀಳುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಎನ್ ಮಾತನಾಡಿ ಸಂಜೀವಿನಿ ಒಕ್ಕೂಟದ ಸದಸ್ಯರು ನಡೆಸುವ ಕಾರ್ಯಕ್ರಮಗಳು ಅಭೂತಪೂರ್ವವಾಗಿ ಮೂಡಿಬರುತ್ತಿದೆ. ಪ್ರಾಚೀನ ವಸ್ತುಗಳು, ಆಹಾರ ಖಾದ್ಯಗಳು ಪರಿಚಯಿಸಿ ತಾಲೂಕು ಪಂಚಾಯತ್ ನಲ್ಲಿ ಆಟಿಯ ರಂಗು ಪಸರಿಸಿದೆ.


ಸಂಜೀವಿನಿ ಮಹಿಳೆಯರಿಗೆ ಬದುಕುವ ದಾರಿ ಮಾಡಿಕೊಟ್ಟಿದ್ದು, ಆರ್ಥಿಕವಾಗಿ ಸಬಲೀಕರಣಗೊಳಿಸುತ್ತಿದೆ.
ತಾಲೂಕಿನ 23 ಗ್ರಾಮ ಪಂಚಾಯತ್ನಲ್ಲಿ ಮಹಿಳೆಯರು ಸ್ವಚ್ಚವಾಹಿನಿಯ ಚಾಲಕರಾಗಿದ್ದಾರೆ. ಸಂಜೀವಿನಿ ಮೂಲಕ ಉಜಿರೆಯಲ್ಲಿ ಸೂಪರ್ ಮಾರ್ಕೆಟ್ ತೆರೆಯುವ ಯೋಜನೆ ಮುಂಬರುವ ಯೋಜನೆಯಿದ್ದು ಜಿಲ್ಲೆಯಲ್ಲಿ ಹೆಸರುವಾಸಾಗಿರುವ ತಾಲೂಕಿನ ಸಂಜೀವಿನಿ ಒಕ್ಕೂಟದ ಕಾರ್ಯ ವೈಖರಿ ಕುರಿತು ಕೊಂಡಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾತನಾಡಿ, ತುಳುನಾಡಿನ ಮಹಿಳೆಯರು ಮತ್ಸರವಿಲ್ಲದೆ ಜೀವನ ನಡೆಸುತ್ತಿದ್ದರು. ಅತ್ತೆ ಸೊಸೆಯ ಬಂಧ ಅನುಬಂಧವಾಗಿತ್ತು. ಪ್ರಕೃತಿಯೊಂದಿಗೆ ನಮ್ಮ ಆಹಾರ ಪದ್ಧತಿಯನ್ನು ವಿನಿಯೋಗಿಸಬೇಕು. ನಮ್ಮ ನಂಬಿಕೆಗಳು ಮೂಢನಂಬಿಕೆಯಾಗದೆ ಮೂಲ ನಂಬಿಕೆಯಾಗಿ ಉಳಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಗುರುವಾಯನಕೆರೆ ನಾಗರೀಕ ಸೇವಾ ಟ್ರಸ್ಟ್ ನ ವಿದ್ಯಾ ಆರ್ ನಾಯಕ್ ಮಾತನಾಡಿ, ಬೀಡಿ ಉದ್ಯಮ ಬಂದ ಮೇಲೆ ಸಮಾನತೆ ಬಂದಿದೆ. ಪ್ರಸ್ತುತ ದಿನಗಳಲ್ಲಿ ನಮ್ಮ ಆಚಾರ ವಿಚಾರಗಳು ಬದಲಾವಣೆಯಾಗಿದೆ. ಆಟಿ ತಿಂಗಳಲ್ಲಿ ಬದುಕು ಕಷ್ಟವಿದ್ದರೂ ಮಹಿಳೆಯರ ಮೊಗದಲ್ಲಿ ನಗೆ ಬೀರುವ ತಿಂಗಳು. ಜಂಕ್ ಫುಡ್ ವರ್ಲ್ಡ್ ನಲ್ಲಿರುವ ನಾವು ಪರಿಸರದೊಂದಿಗೆ ಬದುಕು ಅನಿವಾರ್ಯತೆ ಎದುರಾಗಿದೆ.
ಪೂರ್ವದಲ್ಲಿ ಆಟಿ ತಿಂಗಳ ದಿನಚರಿಗಳು, ದುಡಿಮೆ, ಆಹಾರ, ವಿಹಾರ, ಆಟಿಯ ಮಳೆ, ಜೀವನ ಪದ್ದತಿ, ಹಿರಿಯ ಜೀವನ ಶೈಲಿಯನ್ನು ವಿವರಿಸಿದರು.

ತಾಲೂಕು ಎನ್ ಆರ್ ಎಲ್ ಎಂ ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, 12 ತಿಂಗಳುಗಳಲ್ಲಿ ಆಟಿ ತಿಂಗಳು ತುಳುನಾಡಿನಲ್ಲಿ ವೈಶಿಷ್ಟ್ಯ ಪೂರ್ಣ ತಿಂಗಳಾಗಿದೆ. ವಿವಿಧ ಬಗೆಯ ಆಹಾರ ಖಾದ್ಯಗಳು, ಆಟಗಳನ್ನು ಈ ತಿಂಗಳಿನಲ್ಲಿ ಕಾಣಬಹುದಾಗಿದೆ. ಆದರೆ ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಈ ತಿಂಗಳ ಮಹತ್ವವನ್ನು ಮುಂದಿನ ಜನಾಂಗಕ್ಕೆ ಪಸರಿಸಿ, ಅರಿವು ಮೂಡಿಸುವ ಸಲುವಾಗಿ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವಿಶೇಷ ಕಾರ್ಯಕ್ರಮ:
ವಿವಿಧ ಬಗೆಯ 147 ಖಾದ್ಯಗಳು, ಮೆರುಗು ತಂದ ಆಂಟಿ ಕಳೆಂಜ ಪ್ರವೇಶ, ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆ ಅಲಂಕಾರ, ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರ ಕೋರಿದ ಕಟ್ಟ ಡ್ಯಾನ್ಸ್ ರಂಗೇರಿಸಿತು‌. ಸಂಜೀವಿನಿ ಮಾಸಿಕ ಸಂತೆ ನಡೆಯಿತು.

ಎನ್ ಆರ್ ಎಲ್ ಎಂ. ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಜೈನ್, ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಸಫಾನ, ತಾಲೂಕಿನ 48 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕ ಜಯಾನಂದ್ ಸ್ವಾಗತಿಸಿ, ಕಾರ್ಯದರ್ಶಿ ಶೀಲಾ ವಂದಿಸಿದರು.
ವಸಂತಿ, ಮಾಲಾತಿ ನೀತಾ ನಿರೂಪಿಸಿದರು. ತಾಲೂಕು ವ್ಯವಸ್ಥಾಪಕ ನಿತೀಶ್, ಸಂಜೀವಿನಿ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಹಾಗೂ ವಿಣಾಶ್ರೀ ಕೆ.ಕೆ., ಟಿ.ಐ.ಎಂ.ಎಸ್. ವಿನೋದ್ ಪ್ರಸಾದ್ ಕಲ್ಲಾಜೆ, ಬಿ.ಆರ್.ಪಿ.ಆರ್.ಐ ಶ್ರೀಕಲಾ, ಸಂಜೀವಿನಿ ಸದಸ್ಯರು ಸಹಕರಿಸಿದರು.

Related posts

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ಧರ್ಮಸ್ಥಳ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ಬೆಳಾಲು ಪ್ರೌಢಶಾಲಾ ಮಕ್ಕಳಿಂದ ಬಳಂಜ ಫಾರ್ಮ್ ಭೇಟಿ

Suddi Udaya

ಬಂಟರ ಸಂಘ ಕಾವಳಕಟ್ಟೆ ವಲಯ : ಕಲಾಭಿನಂದನೆ – 2026 ಸಂಭ್ರಮಾಚರಣೆ

Suddi Udaya

ಪೆರೋಡಿತ್ತಾಯಕಟ್ಟೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ

Suddi Udaya

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ಆಶ್ರಯದಲ್ಲಿ ‘ಆಟಿಡೊಂಜಿ ಕೂಟ’

Suddi Udaya
error: Content is protected !!