September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಯು.ಎಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

ಉಜಿರೆ: ಯು.ಎಸ್ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವು ಉಜಿರೆ ಸೌತ್ ಪ್ಯಾಲೇಸ್ ಹೋಟೇಲ್ ಬಳಿ ನಡೆಯಿತು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡುವೆಟ್ನಾಯ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ರಾಷ್ಟ್ರ ಅಭಿವೃದ್ಧಿ ಸಾಧಿಸಬೇಕು ಎಂದರೆ ನಾಗರಿಕರ ಪಾತ್ರ ಅತ್ಯಂತ ಅಗತ್ಯ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಭಾವನೆ ನಮ್ಮಲ್ಲಿ ಇದ್ದರೆ ವಿಘಟನೆ ಮಾಡುವ ಶಕ್ತಿಯನ್ನು ಎದುರಿಸಬಹುದು. ನಾವು ಮಾಡುವ ಕೆಲಸ ರಾಷ್ಟ್ರಕ್ಕೆ ಪೂರಕವಾಗಿರಲಿ ಎಂದು ಶುಭಾಶಯಗಳನ್ನು ತಿಳಿಸಿದರು.

ಉಜಿರೆ ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲತೀಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಉದ್ಯಮಿಗಳಾದ ರಾಜೇಶ್ ಪೈ, ಶಿವಕಾಂತ, ಪ್ರವೀಣ್ ಫೆರ್ನಾಂಡಿಸ್, ರಝಾಕ್, ಮೋಹನ್ ಚೌಧರಿ, ಪ್ರಶಾಂತ್ ಜೈನ್, ಹೆಚ್.ಆರ್ ಪಾಟೀಲ್, ಪದ್ಮನಾಭ ಶೆಟ್ಟಿಗಾರ್, ಬೆಳ್ತಂಗಡಿ ಪತ್ರಕರ್ತ ಸಂಘದ ಉಪಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಝಕರಿಯ ಎಸ್.ಎಲ್.ಬಿ. ಲ್ಯಾಂಡ್ ಲಿಂಕ್ಸ್ ಉಜಿರೆ, ಯುಬಿ ಆಟೋ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಹಸೈನಾರ್, ವಿಕ್ರಂತ್ ಸೋಮಯಾಜಿ ಉಪಸ್ಥಿತರಿದ್ದರು.

ಉಜಿರೆ ಶ್ರೀ ದುರ್ಗಾ ಟೆಕ್ಸ್ಟ್ ಟೈಲ್ಸ್ ನ ಮಾಲಕ ಮೋಹನ್ ಚೌಧರಿ ವತಿಯಿಂದ ಆಟೋ ಚಾಲಕರಿಗೆ ಖಾಕಿ ಬಟ್ಟೆಯನ್ನು ವಿತರಿಸಿದರು.

ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಧನೇಶ್ ಧನ್ವಿ ಅಂಬ್ಯುಲೆನ್ಸ್ ಉಜಿರೆ, ಶ್ರೀಕಾಂತ್ ಮೆಸ್ಕಾಂ ಉಜಿರೆ, ಜಲೀಲ್ ಬಾಬ ಅಂಬ್ಯುಲೆನ್ಸ್ ಬೆಳ್ತಂಗಡಿ, ಆಸಿಫ್ ಸಮಾಜ ಸೇವಕರು ಕುಂಟಿನಿ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯು.ಎಸ್. ಆಟೋ ಚಾಲಕ ಮಾಲಕರ ಸಂಘ, ಉಜಿರೆ ಇದರ ಉಪಾಧ್ಯಕ್ಷರು, ಕಾರ್ಯದರ್ಶಿ, ಸರ್ವ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಜನಾರ್ಧನ ಶಾಲಾ ವಿದ್ಯಾರ್ಥಿಗಳು ದೇಶ ಭಕ್ತಿಗೀತೆಯನ್ನು ಹಾಡಿದರು. ಆಕಾಶ್ ಕೊಕ್ರಾಡಿ ನಿರೂಪಿಸಿದರು.

Related posts

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಸೌತಡ್ಕ ಸೇವಾ ಸಮಿತಿ ವತಿಯಿಂದ ಸೂರ್ಯತ್ತಾವು ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ

Suddi Udaya

ದಾರಿ ಮಧ್ಯೆ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

Suddi Udaya

ಶಾಸಕ ಹರೀಶ್ ಪೂಂಜರಿಂದ ಬಳಂಜ ಶಾಲಾ ಎಲ್.ಕೆ.ಜಿ ಕೊಠಡಿ ಉದ್ಘಾಟನೆ ಮತ್ತು ಅಶ್ವಥ್ ಹೆಗ್ಡೆ ಫೌಂಡೇಶನ್ ನಿಂದ ಶಾಲಾ ವಾಹನ ಸಮರ್ಪಣೆ

Suddi Udaya

ನ.10: ಬಳಂಜ -ನಾಲ್ಕೂರು – ತೆಂಕಕಾರಂದೂರು ಗ್ರಾಮದ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕ ಪ್ರಥಮ ವರ್ಷದ ಕೆಸರ್ದ ಲೇಸ್ ಬಲೇ ಗೊಬ್ಬುಗ

Suddi Udaya

ಕೊಕ್ಕಡ: ನಿವೃತ್ತ ಅಧ್ಯಾಪಕ ಕುಂ‌‌ಞಪ್ಪ ಗೌಡ ದಂಪತಿ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ: ಸಂಘ ಸಂಸ್ಥೆಗಳಿಗೆ ಧನಸಹಾಯ

Suddi Udaya

ಸಿದ್ದಕಟ್ಟೆ ಕೊಡಂಗೆ ಕಂಬಳದ ವತಿಯಿಂದ ಎಕ್ಸೆಲ್ ಕಾಲೇಜ್ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌ ರವರಿಗೆ ಸನ್ಮಾನ

Suddi Udaya
error: Content is protected !!